ADVERTISEMENT

ಕೋವಿಡ್: ಬೆಂಗಳೂರಿನಲ್ಲಿ ವಾರದಲ್ಲಿ 4,238 ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 15:52 IST
Last Updated 26 ಜೂನ್ 2022, 15:52 IST

ಬೆಂಗಳೂರು: ನಗರದಲ್ಲಿ ಒಂದು ವಾರದಲ್ಲಿ 1.09 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 4,238 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಎರಡು ದಿನಗಳಿಂದ ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಶನಿವಾರ 236 ಮಂದಿ ಕೋವಿಡ್ ಪೀಡಿತರಾದರೆ, ಭಾನುವಾರ 131 ಮಂದಿ ಸೋಂಕಿತರಾಗಿದ್ದಾರೆ. ಮರಣ ಪ್ರಕರಣ ಹೊಸದಾಗಿ ವರದಿಯಾಗಿಲ್ಲ. ಸೋಂಕಿತರಲ್ಲಿ ಮತ್ತೆ 517 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 17.99 ಲಕ್ಷ ದಾಟಿದೆ. ಸೋಂಕಿತರಲ್ಲಿ ಈವರೆಗೆ 17.77 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ನಗರದಲ್ಲಿ 4,211 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ ಸದ್ಯ 69 ಮಂದಿಆಸ್ಪತ್ರೆಚಿಕಿತ್ಸೆಗೆ ಒಳಗಾಗಿದ್ದಾರೆ. 58 ಮಂದಿ ಸಾಮಾನ್ಯ ಹಾಸಿಗೆ, 10 ಮಂದಿ ಐಸಿಯು ಹಾಸಿಗೆ ಹಾಗೂ ಒಬ್ಬರು ಎಚ್‌ಡಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ದೈನಂದಿನಕೋವಿಡ್ಪರೀಕ್ಷೆಗಳ ಸಂಖ್ಯೆ 17 ಸಾವಿರ ದಾಟಿದೆ. ಸೋಂಕು ದೃಢ ಪ್ರಮಾಣ ಶೇ 4ರ ಗಡಿಯೊಳಗೆ ಇದೆ. ಒಂದು ವಾರದ ಅವಧಿಯಲ್ಲಿ4,323 ಮಂದಿ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಈ ತಿಂಗಳ ಮೊದಲ ವಾರದಲ್ಲಿ ಸೋಂಕು ದೃಢ ಪ್ರಮಾಣ ಶೇ 2ರ ಗಡಿಯೊಳಗಿತ್ತು.

ವಾರದಿಂದ ಬೆಳ್ಳಂದೂರು (57), ಕಾಡುಗೋಡಿ (31),ದೊಡ್ಡ ನೆಕ್ಕುಂದಿ (28), ವರ್ತೂರು (23), ಹಗದೂರು (17), ಎಚ್‌ಎಸ್‌ಆರ್ ಲೇಔಟ್‌ (15), ಹೊರಮಾವು (14), ಹೂಡಿ (11), ಬೇಗೂರು (11) ಹಾಗೂ ಗರುಡಾಚಾರ್ ಪಾಳ್ಯದಲ್ಲಿ (10) ದೈನಂದಿನ ಪ್ರಕರಣಗಳ ಸರಾಸರಿ ಅಧಿಕವಿದೆ. ಈ ವಾರ್ಡ್‌ಗಳಲ್ಲಿ ನೂರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.