ADVERTISEMENT

‘ಕಿರಾಣಿ ಅಂಗಡಿ ಸಿಬ್ಬಂದಿಗೂ ಲಸಿಕೆ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:40 IST
Last Updated 17 ಫೆಬ್ರುವರಿ 2021, 21:40 IST

ಬೆಂಗಳೂರು: ‘ಕಿರಾಣಿ ಅಂಗಡಿ ಹಾಗೂ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಕೊಂಡಿರುವವರನ್ನೂ ಕೊರೊನಾ ಸೇನಾನಿಗಳೆಂದು ಪರಿಗಣಿಸಿ ಕೋವಿಡ್‌ ಲಸಿಕಾ ಅಭಿಯಾನದಲ್ಲಿ ಸೇರ್ಪಡೆ ಮಾಡಬೇಕು’ ಎಂದು ಮೆಟ್ರೊ ಕ್ಯಾಷ್ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

‘ಭಾರತದಲ್ಲಿ ಅಂದಾಜು 1.2 ಕೋಟಿ ಮಂದಿ ಕಿರಾಣಿ ಅಂಗಡಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಅವರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಇವರೆಲ್ಲಾ ಮನೆ ಮನೆಗೆ ಹೋಗಿ ದಿನಸಿ ಪೂರೈಸಿದ್ದಾರೆ. ಅವರಿಗೂ ಸೋಂಕು ತಗಲುವ ಅಪಾಯ ಇದೆ. ಹೀಗಾಗಿ ಲಸಿಕೆ ನೀಡಿ’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT