ADVERTISEMENT

15 ದಿನಗಳಲ್ಲಿ ಅಸ್ಥಿ ಪಡೆಯದಿದ್ದರೆ ಸರ್ಕಾರದಿಂದಲೇ ವಿಸರ್ಜನೆ: ಸಚಿವ ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:31 IST
Last Updated 22 ಮೇ 2021, 19:31 IST
ಆರ್. ಅಶೋಕ್
ಆರ್. ಅಶೋಕ್   

ಬೆಂಗಳೂರು: ’ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರ ಅಸ್ಥಿಯನ್ನು ಮೃತರ ಸಂಬಂಧಿಕರು ಪಡೆಯದೇ ಇರುವುದರಿಂದ ಇದು ಚಿತಾಗಾರಗಳಲ್ಲಿಯೇ ಉಳಿದುಕೊಂಡಿದೆ. ಸಂಬಂಧಿಕರು ಈ ಚಿತಾಭಸ್ಮವನ್ನು ಪಡೆಯದೆ ಹೋದರೆ, 15 ದಿನಗಳ ನಂತರ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸಾಮಾನ್ಯವಾಗಿ ಒಂದೆರಡು ದಿನಗಳ ನಂತರ ಅವರ ಸಂಬಂಧಿಗಳು ಬಂದು ಅಸ್ಥಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಕೆಲ ಪ್ರಕರಣಗಳಲ್ಲಿ ಸಂಬಂಧಿಕರು ಈವರೆಗೆ ಬಂಧಿಲ್ಲ. ಸಂಬಂಧಿಸಿದವರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಅವರ ಫೋನ್ ಸ್ವಿಚ್ಡ್‌ ಆಫ್ ಆಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT