ADVERTISEMENT

ಡಿ.ಜೆ.ಹಳ್ಳಿ | ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 16:03 IST
Last Updated 1 ಡಿಸೆಂಬರ್ 2024, 16:03 IST
ಸೈಯದ್ ನಾಸಿರ್ ಪಾಶಾ,   ತಸೀನಾ ಬಾನು
ಸೈಯದ್ ನಾಸಿರ್ ಪಾಶಾ,   ತಸೀನಾ ಬಾನು   

ಬೆಂಗಳೂರು: ಗೃಹ ಬಳಕೆ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಲ್ಲಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಡಿ.ಜೆ.ಹಳ್ಳಿಯಲ್ಲಿ ನಡೆದಿದೆ.

ಡಿ. ಜೆ ಹಳ್ಳಿಯ ಮೂರನೇ  ಅಡ್ಡ ರಸ್ತೆಯಲ್ಲಿರುವ ಆನಂದ್ ಚಿತ್ರಮಂದಿರದ ಬಳಿಯಿರುವ ಮನೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಸೈಯದ್ ನಾಸಿರ್ ಪಾಶಾ, ಅವರ ಪತ್ನಿ ತಸೀನಾ ಬಾನು, ಮಕ್ಕಳಾದ ಸೈಯದ್‌ ಖಾಲಿದ್ (7) ಮತ್ತು ಉಮ್ಮೆ ಕುಲ್ಸೂಮ್ (5) ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಸೈಯದ್ ನಾಸೀರ್, ಮನೆಯಲ್ಲಿ ಸಿಲಿಂಡರ್‌ನ ರೆಗ್ಯುಲೇಟರ್ ಆನ್ ಮಾಡಿಟ್ಟಿದ್ದರು. ಮನೆಗೆ ವಾಪಸ್ ಬಂದಾಗ ಅನಿಲ ಸೋರಿಕೆ ಆಗಿರುವುದು ಗೊತ್ತಾಗಿದೆ. ತಕ್ಷಣ ರೆಗ್ಯುಲೇಟರ್ ತೆಗೆದು ಮನೆಯಿಂದ ಪತ್ನಿ ಮತ್ತು ಮಕ್ಕಳನ್ನು ಹೊರಗೆ  ಕಳಿಸಲು ಮುಂದಾಗಿದ್ದರು. ಅದೇ ವೇಳೆ ಅನಿಲದ ವಾಸನೆ ಹೋಗಲೆಂದು ಫ್ಯಾನ್ ಆನ್ ಮಾಡಿದ್ದರು. ಆದರೆ, ಮನೆಯಲ್ಲೆಲ್ಲ ತುಂಬಿಕೊಂಡಿದ್ದ ಅನಿಲ ಒಮ್ಮೆಲೆ ಸ್ಫೋಟಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನೆಯಲ್ಲಿ ನಾಲ್ವ‌ರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಚಾವಣಿ ಹಾರಿಹೋಗಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದಲ್ಲಿದ್ದ ಮೂರು ಮನೆಗಳಿಗೂ ಹಾನಿಯಾಗಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಡಿ.ಜೆ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.