ADVERTISEMENT

ಪರಿಷ್ಕೃತ ವೇತನದ ಅನ್ವಯ ದಿನಗೂಲಿ ನೌಕರರಿಗೂ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:38 IST
Last Updated 15 ನವೆಂಬರ್ 2018, 18:38 IST

ಬೆಂಗಳೂರು: ದಿನಗೂಲಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯ ಅನ್ವಯ ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದಿನಗೂಲಿ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಅನ್ವಯ ಕರ್ತವ್ಯದಲ್ಲಿ ಮುಂದುವರಿದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಗೊಳಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇ 75ರಷ್ಟನ್ನು ಅರ್ಹ ದಿನಗೂಲಿ ನೌಕರರಿಗೂ ಅವರ ಕನಿಷ್ಠ ವೇತನ ಆಧರಿಸಿ ಮಂಜೂರು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯ ಆಗುವಂತೆ ನೀಡಲಾಗುವ ಮನೆಬಾಡಿಗೆ ಭತ್ಯೆಯ ಶೇ 75ರಷ್ಟನ್ನು ದಿನಗೂಲಿ ನೌಕರರ ಕನಿಷ್ಠ ವೇತನದ ಮೇಲೆ ಮನೆಬಾಡಿಗೆ ಭತ್ಯೆಯಾಗಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.