ADVERTISEMENT

ದಸರಾ | ದಾಬಸ್ ಪೇಟೆ: ವ್ಯಾಪಾರ ಅಷ್ಟಕಷ್ಟೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:02 IST
Last Updated 5 ಅಕ್ಟೋಬರ್ 2019, 19:02 IST
ಹಣ್ಣಿನ ಖರೀದಿಯಲ್ಲಿ ತೊಡಗಿದ್ದ ಗ್ರಾಹಕ 
ಹಣ್ಣಿನ ಖರೀದಿಯಲ್ಲಿ ತೊಡಗಿದ್ದ ಗ್ರಾಹಕ    

ದಾಬಸ್ ಪೇಟೆ: ದಸರಾ ಅಂಗವಾಗಿ ಇಲ್ಲಿನ ಉದ್ದಾನೇಶ್ವರ ವೃತ್ತ, ದೊಡ್ಡಬಳ್ಳಾಪುರ, ಕೊರಟಗೆರೆ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬೂದುಗುಂಬಳ, ನಿಂಬೆಹಣ್ಣು, ಬಾಳೆಕಂದು, ತೆಂಗಿನಕಾಯಿ ಹಾಗೂ ಹೂ-ಹಣ್ಣುಗಳ ವ್ಯಾಪಾರ ನಡೆಯಿತು.

ವಿವಿಧ ಎತ್ತರದ ಬಾಳೆಕಂದುಗಳಿಗೆ ಅದರದೇ ದರ ನಿಗದಿಯಾಗಿದ್ದರೆ, ಬೂದುಗುಂಬಳ ಕೆ.ಜಿಗೆ ₹20ರಂತೆ ಮಾರಲಾಗುತ್ತಿತ್ತು. ಹೂವುಗಳ ದರ ಹೆಚ್ಚಾಗಿತ್ತು. ತರಕಾರಿಯ ಬೆಲೆಯಲ್ಲಿ ಸ್ಥಿರತೆ ಕಂಡು ಬಂತು. ಮೂರು ದಿನಗಳಿಂದ ಮಧ್ಯಾಹ್ನವೇ ಮಳೆ ಬರುತ್ತಿರುವುದು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಕಾರ್ಖಾನೆಗಳು, ಅಂಗಡಿಗಳು ಹೆಚ್ಚಿವೆ ಒಳ್ಳೆ ವ್ಯಾಪಾರದ ನಿರೀಕ್ಷೆ ಇತ್ತು. ಸಾಕಷ್ಟು ಕಾರ್ಖಾನೆಗಳು ಪೂಜೆ ಮುಗಿಸಿರುವುದರಿಂದ ವ್ಯಾಪಾರ ಅಷ್ಟಕಷ್ಟೆ ಎಂದು ವರ್ತಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT