ADVERTISEMENT

ಮೂರು ದಿನದವರೆಗೆ ಸರ್ಕಾರಿ ರಜೆ | ಹಲವೆಡೆ ಶನಿವಾರವೇ ಆಯುಧ ಪೂಜೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:01 IST
Last Updated 5 ಅಕ್ಟೋಬರ್ 2019, 19:01 IST
ಎಂ.ಎಸ್‌. ಬಿಲ್ಡಿಂಗ್‌ನ ಆವರಣದಲ್ಲಿ ಸರ್ಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು
ಎಂ.ಎಸ್‌. ಬಿಲ್ಡಿಂಗ್‌ನ ಆವರಣದಲ್ಲಿ ಸರ್ಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು   

ಬೆಂಗಳೂರು: ಭಾನುವಾರದಿಂದ ಮೂರು ದಿನಗಳವರೆಗೆ ಸರ್ಕಾರಿ ರಜೆ ಇರುವುದರಿಂದ ನಗರದ ಹಲವು ಸರ್ಕಾರಿ ಹಾಗೂ ಕಚೇರಿಗಳಲ್ಲಿ ಶನಿವಾರವೇ ಆಯುಧ ಪೂಜೆ ನೆರವೇರಿಸಲಾಯಿತು.

ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿಗಳು ಹಾಗೂ ಎಂ.ಎಸ್. ಬಿಲ್ಡಿಂಗ್‌ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಸರ್ಕಾರಿ ವಾಹನಗಳಿಗೆ, ಕಂಪ್ಯೂಟರ್‌ಗಳಿಗೆ ಸಿಬ್ಬಂದಿ ಪೂಜೆಯನ್ನು ನೆರವೇರಿಸಿದರು.

ಖಾಸಗಿ ಕಂಪನಿಗಳು ಕೂಡ ಸೋಮವಾರ ರಜೆ ಘೋಷಿಸಿರುವುದರಿಂದ ಎರಡು ದಿನ ಮುನ್ನವೇ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಯುಧಗಳಿಗೆ ಪೂಜೆ ಸಲ್ಲಿಸಿ, ಸಿಬ್ಬಂದಿಗೆ ಸಿಹಿ ವಿತರಿಸಿ, ಶುಭ ಕೋರಿ ಸಿಬ್ಬಂದಿ ಹಬ್ಬ ಆಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.