ADVERTISEMENT

ಬೆಂಗಳೂರು: ಪಂಡಿತ ಸುಧಾಕರ ಶರ್ಮ

​ಪ್ರಜಾವಾಣಿ ವಾರ್ತೆ
Published 10 ಮೇ 2022, 2:34 IST
Last Updated 10 ಮೇ 2022, 2:34 IST
ಪಂಡಿತ ಸುಧಾಕರ ಶರ್ಮ
ಪಂಡಿತ ಸುಧಾಕರ ಶರ್ಮ   

ಬೆಂಗಳೂರು: ವೇದ, ವಿಜ್ಞಾನ ಮತ್ತು ವೈಚಾರಿಕ ತೆಯನ್ನು ಮೇಳೈಸಿ ಕೊಂಡಿದ್ದ ಪಂಡಿತ ಸುಧಾಕರ ಶರ್ಮ (64) ಅವರು ಸೋಮವಾರ ನಿಧನರಾದರು.

ಇವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ‘ಚಂದನ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹೊಸ ಬೆಳಕು’ ಕಾರ್ಯಕ್ರಮವನ್ನು ಸುಧಾಕರ ಶರ್ಮ ಅವರು ನಡೆಸಿಕೊಡುತ್ತಿದ್ದರು. 1973ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರಾಗಿದ್ದರು.

‘ಮದುವೆ-ಏಕೆ-ಯಾವಾಗ-ಹೇಗೆ?’,‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಕೃತಿಗಳನ್ನು ರಚಿಸಿದ್ದರು.

ADVERTISEMENT

ಅವೈಜ್ಞಾನಿಕ ಸಂಪ್ರದಾಯಗಳನ್ನು ಅವರು ಬಲವಾಗಿ ವಿರೋಧಿಸುತ್ತಿದ್ದರು. ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತರ‌ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಗಳನ್ನು ಮಂಡಿಸಿದ್ದ ಅವರು, ವೇದ ಮಂತ್ರಗಳ ಅರ್ಥ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರುಹಾಗೂ ಬಾಲಕಿಯರಿಗೂ ಉಪನಯನ ಸಂಸ್ಕಾರ ಮಾಡಿಸಿದ್ದರು. ಇವರ ಅಂತ್ಯಸಂಸ್ಕಾರ ನಗರದ ಚಾಮರಾಜಪೇಟೆಯಲ್ಲಿ ಸೋಮವಾರ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.