ADVERTISEMENT

ಯಾವ ತಪ್ಪಿಗೆ ಸುಡುವ ಈ ಶಿಕ್ಷೆ?

ಬೆಂಕಿಯಲ್ಲಿ ನಲುಗಿದ್ದ ಬಸ್ಸೊಂದರ ಸ್ವಗತ l ಜನ ಜಾಗೃತಿಗೆ ಸಾರಿಗೆ ಸಂಸ್ಥೆಯ ಕ್ರಮ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 19:58 IST
Last Updated 13 ಸೆಪ್ಟೆಂಬರ್ 2019, 19:58 IST
ಬೆಂಕಿಯಿಂದ ಜಖಂಗೊಂಡಿದ್ದ ಬಸ್‌ಗೆ ಫಲಕಗಳನ್ನು ಕಟ್ಟಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವುದು –-ಪ್ರಜಾವಾಣಿ ಚಿತ್ರ
ಬೆಂಕಿಯಿಂದ ಜಖಂಗೊಂಡಿದ್ದ ಬಸ್‌ಗೆ ಫಲಕಗಳನ್ನು ಕಟ್ಟಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವುದು –-ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಾವ ತಪ್ಪಿಗೆ ಈ ಘೋರ ಶಿಕ್ಷೆ?, ತಪ್ಪೇ ಇಲ್ಲದ ಸೇವೆಗೆ ಕಲ್ಲಿನೇಟು, ಬೆಂಕಿಯ ಸ್ಪರ್ಶ... ಇದು ನ್ಯಾಯವೇ?

ಈ ರೀತಿಯ ಪ್ರಶ್ನೆಗಳಿರುವ ಫಲಕಗಳೊಂದಿಗೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಅನ್ನು ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಕನಕಪುರ–ಮಳವಳ್ಳಿ ಮಾರ್ಗದಲ್ಲಿ ಬೆಂಕಿಗೆ ಆಹುತಿಯಾದ ಬಸ್ ಇದು.

ADVERTISEMENT

ಬಸ್‌ನ ಮುಂಭಾಗದಲ್ಲಿ ಪುಷ್ಪಗುಚ್ಛವೊಂದನ್ನು ಇರಿಸಲಾಗಿದೆ. ಸುತ್ತ ವಿವಿಧ ಪ್ರಶ್ನೆಗಳನ್ನು ಹೊತ್ತ ಫಲಕಗಳನ್ನು ನೇತು ಹಾಕಲಾಗಿದೆ.

‘58 ವರ್ಷಗಳಿಂದ ಹಗಲಿರುಳು ನಿಮ್ಮ ಸೇವೆಗೇ ಮುಡಿಪಾಗಿರುವ ನನಗೆ ಕಲ್ಲೇಟೇ? ಸಾವಿರಾರು ಜನರಿಗೆ ಪ್ರತಿನಿತ್ಯ ಸೇವೆ ಒದಗಿಸುತ್ತಿದ್ದೇನೆ. ನನ್ನ ಸೇವೆಗೆ ನೀವು ನೀಡುವ ಕೊಡುಗೆ ಬೆಂಕಿಯೇ?’ ಈ ರೀತಿ ಪ್ರಶ್ನೆಗಳನ್ನು ಬರೆಯಲಾಗಿದೆ.

‍ಪ್ರತಿಭಟನೆ, ಬಂದ್ ಸಂದರ್ಭದಲ್ಲಿ ಜನರು ಬಸ್‌ಗಳ ಮೇಲೆ ಕಲ್ಲು ತೂರುವುದು, ಬೆಂಕಿ ಹಚ್ಚುವುದನ್ನು ತಪ್ಪಿಸಲು ಜನ ಜಾಗೃತಿ ಮೂಡಿಸಲು ಬಸ್ ನಿಲ್ಲಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದರು.

ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಜನಸಂಚಾರವಿರುವ ಪ್ರಮುಖ ತಾಣದಲ್ಲಿ ಇದನ್ನು ನಿಲ್ಲಿಸಲಾಗಿದ್ದು, ಸಹಜವಾಗಿ ಸಾರ್ವಜನಿಕರನ್ನು ಸೆಳೆಯುತ್ತಿದ್ದು, ಚರ್ಚೆಗೆ ವಸ್ತುವಾಗಿದೆ.

3 ವರ್ಷದಲ್ಲಿ 244 ಬಸ್ ಜಖಂ

ಕಳೆದ ಮೂರು ವರ್ಷಗಳಲ್ಲಿ 224 ಬಸ್‌ಗಳು ಜಖಂ ಗೊಂಡಿದ್ದು, 5 ಬಸ್‌ಗಳು ಸುಟ್ಟಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಬಸ್‌ಗಳು ಜಖಂಗೊಂಡಿದ್ದರಿಂದ ಒಟ್ಟು ₹28.51 ಲಕ್ಷ ಮತ್ತು ಬಸ್‌ ಸುಟ್ಟಿದ್ದರಿಂದ ₹49.50 ಲಕ್ಷ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.