ಬಸವಕಲ್ಯಾಣ: ‘ಹೈದರಾಬಾದ್ ನಿಜಾಮ್ ಆಡಳಿತದಲ್ಲಿನ ಈ ಭಾಗವನ್ನು ಭಾರತದೊಂದಿಗೆ ವಿಲೀನಗೊಳಿಸುವ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ಬಲಿದಾನಗೈದ ಧರ್ಮಪ್ರಕಾಶರನ್ನು ಮರೆಯಲಾಗದು' ಎಂದು ಹೈದರಾಬಾದ್‌ನ ನರೇಂದ್ರ ಆಚಾರ್ಯ ಹೇಳಿದ್ದಾರೆ.
ನಗರದ ಆರ್ಯ ಸಮಾಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಹುತಾತ್ಮ ಧರ್ಮಪ್ರಕಾಶರ ಬಲಿದಾನದ 87ನೇ ಪುಣ್ಯಸ್ಮರಣೆಯಲ್ಲಿ ಅವರು ಹುತಾತ್ಮ ಸ್ಮಾರಕ ಸ್ತಂಭ ಉದ್ಘಾಟಿಸಿ ಮಾತನಾಡಿದರು.
‘ಧರ್ಮಪ್ರಕಾಶರ ಸಮಾಧಿ ಸ್ಥಳದಲ್ಲಿ ತಡವಾಗಿಯಾದರೂ ಸ್ಮಾರಕ ಆಗುತ್ತಿರುವುದು ಸಂತಸ ತಂದಿದೆ. ರಾಷ್ಟ್ರಪುರುಷರ, ಶರಣರ, ಸಂತ ಮಹಾತ್ಮರ ಸಂದೇಶದ ಪಾಲನೆ ಅಗತ್ಯವಾಗಿದೆ’ ಎಂದರು.
ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಧರ್ಮ, ದೇಶಕ್ಕಾಗಿ ಧರ್ಮಪ್ರಕಾಶ ಬಲಿದಾನಗೈದರು. ಅವರ ಕಾರ್ಯವನ್ನು ಗೌರವಿಸಬೇಕಾಗಿದೆ’ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡ ಬಸವರಾಜ ಆರ್ಯ, ಆರ್ಯ ಸಮಾಜ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ಧಾಜಿ ಪಾಟೀಲ ಬೆಂಗಳೂರು, ನಯನಕುಮಾರ ಆಚಾರ್ಯ ಪರಳಿ, ಆರ್ಯ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾಜಿರಾವ್ ಜಗತಾಪ, ಕಾರ್ಯದರ್ಶಿ ಸಂಜೀವಕುಮಾರ ಜಾಧವ, ಸುರೇಂದ್ರಗಿರಿ ಗೋಸ್ವಾಮಿ, ಶಿವಾಜಿ ಕಾಳೆ, ಅಭಾ ವೇದವಾಣಿ ಮಾತನಾಡಿದರು.
ಪ್ರಮುಖರಾದ ಸುಭಾಷ ಅಷ್ಟೀಕರ್, ಶಿವಶರಣಪ್ಪ ವಾಲಿ, ನಾರಾಯಣರಾವ್ ಚಿದ್ರಿ, ಮಾರುತಿರಾವ್ ಮಹೇಂದ್ರಕರ್, ಸತೀಶ ಲಾಡ, ಮಾಣಿಕರಾವ್ ಲಾಡ, ಅಶ್ವಿನ ಸುತ್ರಾವೆ, ವಿಠಲರಾವ್ ಸೂರ್ಯವಂಶಿ, ನಾರಾಯಣರಾವ್ ಬುನ್ನಾ, ಭಾನುಪ್ರತಾಪ ಪಾಂಡೆ, ಜನಾರ್ದನರಾವ್, ವಿಜಯಕುಮಾರ ಸೇಡೋಳೆ, ಅರ್ಜುನರಾವ್ ಉಪಸ್ಥಿತರಿದ್ದರು.
ಸ್ಮಾರಕ ಸ್ತಂಭ ಉದ್ಘಾಟನೆ
ನಗರದ ಧರ್ಮಪ್ರಕಾಶ ಓಣಿಯಲ್ಲಿ ಹೊಸದಾಗಿ ನಿರ್ಮಿಸಿರುವ ಹುತಾತ್ಮ ಧರ್ಮಪ್ರಕಾಶರ ಸ್ಮಾರಕ ಸ್ತಂಭವನ್ನು ಉದ್ಘಾಟಿಸಲಾಯಿತು. ನರೇಂದ್ರ ಆಚಾರ್ಯ ಅವರು ಪೂಜೆಗೈದು ಉದ್ಘಾಟನೆ ನೆರವೇರಿಸಿದರು. ಬಳಿಕ ಡಾ.ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಆರ್ಯ ಸಮಾಜ ಭವನದವರೆಗೆ ಭಾವಚಿತ್ರದ ಮೆರವಣಿಗೆ ನಡೆಯಿತು. ಧರ್ಮಪ್ರಕಾಶ ಪ್ರಾಥಮಿಕ ಶಾಲೆಯಲ್ಲಿ ಹೋಮವನ್ನೂ ಹಮ್ಮಿಕೊಳ್ಳಲಾಗಿತ್ತು. ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.