ADVERTISEMENT

ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಎಚ್‌.ಪಿ ರಿಫಿಲ್‌ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:20 IST
Last Updated 6 ಡಿಸೆಂಬರ್ 2018, 19:20 IST

ಬೆಂಗಳೂರು: ಪೆಟ್ರೋಲಿಯಂ ಹಾಗೂ ಇತರ ಉತ್ಪನ್ನಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸಲುಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿ (ಎಚ್‌ಪಿಸಿ) ಪ್ರಚಾರ ವಾಹನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ.

ಎಚ್‌ಪಿಸಿ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾ ಭವಾನಿ ಈ ಮಾಹಿತಿ ನೀಡಿದರು. ‘ಎಚ್‌.ಪಿರಿಫಿಲ್‌ ಎನ್ನುವ ಆ್ಯಪ್‌ ಬಿಡುಗಡೆಗೊಳಿಸಿದೆ. ಅದರಲ್ಲಿ ಮೊದಲ ಸಾರಿ ಡಿಜಿಟಲ್‌ ಪಾವತಿ ಮಾಡಿದರೆ ₹85 ಮೌಲ್ಯದಲಾಯಲ್ಟಿ ಪಾಯಿಂಟ್‌ ಸಿಗುತ್ತದೆ. ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ಅದನ್ನು ಬಳಸಿ ಪೆಟ್ರೋಲ್‌ ಹಾಕಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಡಿಜಿಟಲ್‌ ಪಾವತಿ ಹೆಚ್ಚಾದರೆ ನಮಗೂ ಅನುಕೂಲವಾಗಲಿದ್ದು, ಬ್ಯಾಂಕ್‌ಗೆ ಹೋಗಿ ಹಣ ಕಟ್ಟುವುದು ತಪ್ಪುತ್ತದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಪ್ರಚಾರ ವಾಹನದ ಮೂಲಕ ಡಿಜಿಟಲ್‌ ಪಾವತಿಯ ಕುರಿತು ಅರಿವು ಮೂಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.