ADVERTISEMENT

‘ರಾಜಕೀಯ ಜೀವನ ಹಾಳು ಮಾಡಿಕೊಳ್ಳಬೇಡಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:46 IST
Last Updated 22 ಜುಲೈ 2019, 19:46 IST

ಬೆಂಗಳೂರು: ಅತೃಪ್ತ ಶಾಸಕರು ಬಿಜೆಪಿ ಮಾತು ನಂಬಿ ತಮ್ಮ ರಾಜಕೀಯ ಬದುಕು ಹಾಳುಮಾಡಿಕೊಳ್ಳಬಾರದು. ಎಲ್ಲೇ ಇದ್ದರೂ ಮಂಗಳವಾರ ಬೆಳಿಗ್ಗೆ 11ಕ್ಕೆ ಸಭಾಧ್ಯಕ್ಷರ ಮುಂದೆ ಹಾಜರಾಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸೋಮವಾರ ರಾತ್ರಿ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಅತೃಪ್ತರು ಈಗ ತುಳಿದಿರುವ ಹಾದಿಯಿಂದ ಬಿಜೆಪಿಗಷ್ಟೇ ಲಾಭ.ವಿಪ್‌ ಉಲ್ಲಂಘನೆಯಾಗುವುದರಿಂದ ಶಾಸಕರಾಗಿ ಉಳಿಯುವುದಿಲ್ಲ,ಮುಂದಿನ ಸರ್ಕಾರದಲ್ಲಿ ಸಚಿವರಾಗುವುದೂ ಸಾಧ್ಯವಿಲ್ಲ. ರಾಜಕೀಯ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT