ADVERTISEMENT

ವಿದ್ಯುತ್‌ ದರ ಹೆಚ್ಚಿಸಬೇಡಿ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:07 IST
Last Updated 4 ಫೆಬ್ರುವರಿ 2019, 20:07 IST

ಬೆಂಗಳೂರು: ಬೆಸ್ಕಾಂ ಸಲ್ಲಿಸಿರುವ ಕೋರಿಕೆ ಮೇರೆಗೆ ಮುಂದಿನ ಹಣಕಾಸು ವರ್ಷದಿಂದ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹1.01 ದರ ಹೆಚ್ಚಳ ಮಾಡಬಾರದು ಎಂದು ಬಿ–ಪ್ಯಾಕ್‌ ಸಮೂಹಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದೆ.

ಆಯೋಗ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬಿ.ಪ್ಯಾಕ್ ಸಮೂಹದ ಉಪಾಧ್ಯಕ್ಷ ಟಿ.ವಿ.ಮೋಹನ್‍ದಾಸ್ ಪೈ,‘ವಿದ್ಯುತ್‌ ಪೂರೈಕೆ
ಯಲ್ಲಿ ಹೆಚ್ಚಿನ ಸೋರಿಕೆ ಪ್ರಮಾಣ ತೋರಿಸಿ, ‘ಆರ್ಥಿಕ ಹೊರೆಯಾಗುತ್ತಿದೆ’ ಎಂದು ಬೆಸ್ಕಾಂ ವಾದಿಸುತ್ತಿದೆ. ಹೆಚ್ಚಿನ ದರಕ್ಕೆ ವಿದ್ಯುತ್‌ ಖರೀದಿಸುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕು’ ಎಂದರು.

‘ಬೆಸ್ಕಾಂನ ಈಗಿನ ಆರ್ಥಿಕ ಸ್ಥಿತಿ ಸುಸ್ಥಿರವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ದರ ಹೆಚ್ಚಳ ಮಾಡದೇ ಆಯೋಗ ಜನರ ಹಿತಾಸಕ್ತಿ ಕಾಪಾಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.