ADVERTISEMENT

ರಾಜ್ಯದಲ್ಲಿ ಮೊದಲ ಅವಳಿ ಶ್ವಾಸಕೋಶ ಕಸಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:14 IST
Last Updated 4 ಜುಲೈ 2018, 20:14 IST
ವೈದ್ಯರಾದ ಜೂಲಿಯಸ್‌ ಪುನ್ನೆನ್‌ ಹಾಗೂ ತಂಡ ರೋಗಿಯೊಂದಿಗೆ ಇದ್ದಾರೆ
ವೈದ್ಯರಾದ ಜೂಲಿಯಸ್‌ ಪುನ್ನೆನ್‌ ಹಾಗೂ ತಂಡ ರೋಗಿಯೊಂದಿಗೆ ಇದ್ದಾರೆ   

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಅವಳಿ ಶ್ವಾಸಕೋಶ ಕಸಿ ಮಾಡುವಲ್ಲಿ ನಾರಾಯಣ ಹೆಲ್ತ್‌ ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ.

28 ವರ್ಷದ ಯುವಕನಿಗೆ ಜೂನ್‌ 20ರಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇದ್ದ ರೋಗಿ, ಈಗ ಚೇತರಿಸಿಕೊಂಡಿದ್ದಾರೆ.

ಕೇರಳ ಮೂಲದ ಕಟ್ಟಡ ಕಾರ್ಮಿಕನ ಎರಡೂ ಶ್ವಾಸಕೋಶಗಳು ವಿಫಲಗೊಂಡಿದ್ದವು. ಯಶವಂತಪುರದ ಸ್ಪರ್ಶ ಆಸ್ಪತ್ರೆಯ ದಾನಿಯೊಬ್ಬರ ಸಹಾಯದಿಂದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು.

ADVERTISEMENT

‘ಇದು ತೀರಾ ಸಂಕೀರ್ಣ ಶಸ್ತ್ರಚಿಕಿತ್ಸೆ. ಶ್ವಾಸಕೋಶ ವಿಫಲವಾದ ಬಳಿಕ ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ. ಈ ರೋಗಿಗೆ ಎರಡು ಶ್ವಾಸಕೋಶ ಕಸಿ ಮಾಡುವ ಸವಾಲನ್ನು ಪೂರ್ಣಗೊಳಿಸಿದ್ದೇವೆ. ಬೇಗನೆ ದಾನಿ ಸಿಕ್ಕಿದ್ದರಿಂದ ಯೋಜನೆ ಯಶಸ್ವಿಯಾಯಿತು’ ಎಂದು ವೈದ್ಯರಾದ ಜೂಲಿಯಸ್‌ ಪುನ್ನೆನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.