ADVERTISEMENT

ಡ್ರಗ್‌ ಪೆಡ್ಲರ್ ಸಹಚರನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:00 IST
Last Updated 20 ಮಾರ್ಚ್ 2021, 19:00 IST

ಬೆಂಗಳೂರು: ಡಿ.ಜೆ.ಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ಉದ್ಯಮಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳದ ಕೆಂಪಾಪುರ ಬಳಿಯ ಚಿರಂಜೀವಿ ಬಡಾವಣೆಯಲ್ಲಿ ವಾಸವಿದ್ದ ಜೇಮ್ಸ್‌ ಕೆಲ್ವಿನ್‌ (33) ಬಂಧಿತ ಆರೋಪಿ.

‘ಗೋವಿಂದಪುರ ರೈಲ್ವೆ ಗೇಟ್‌ ಬಳಿಯ ಶ್ಯಾಂಪುರ ಮುಖ್ಯರಸ್ತೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು. ಆತನಿಂದ ₹9 ಲಕ್ಷ ಬೆಲೆಬಾಳುವ 60 ಗ್ರಾಂ ತೂಕದ ಕೊಕೇನ್ಹಾಗೂ ಕೃತ್ಯಕ್ಕೆ ಬಳಸಿದ್ದ
ತೂಕದ ಯಂತ್ರ, ಐಫೋನ್, ಐಪ್ಯಾಡ್, ಕಾರು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಬಂಧಿತ ಆರೋಪಿಯು ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಜಾನ್ ಪೆಡ್ಲರ್ ಎಂಬಾತನ ಸಹಚರನೂ ಆಗಿದ್ದಾನೆ. ಮಾದಕ ವಸ್ತುಗಳ ಮಾರಾಟಕ್ಕೆ ಈತ ವಿದ್ಯಾರ್ಥಿಗಳೂ ಅಲ್ಲದೆ, ಇತರ ಗ್ರಾಹಕರನ್ನೂ ಹೊಂದಿದ್ದ. ಹಿಂದೊಮ್ಮೆ ಪೊಲೀಸರಿಗೆ ಸಿಕ್ಕಿಬೀಳುವವನಿದ್ದ. ಅಷ್ಟರಲ್ಲಿ ಮಾದಕ ವಸ್ತುಗಳನ್ನು ಶೌಚಾಲಯದಲ್ಲಿ ಹಾಕಿನಾಶ ಪಡಿಸಿ ತಪ್ಪಿಸಿಕೊಂಡಿದ್ದ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.