ADVERTISEMENT

ಅನಧಿಕೃತ ಹಾಲ್‍ಮಾರ್ಕ್‌; ವ್ಯಾಪಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:40 IST
Last Updated 9 ಆಗಸ್ಟ್ 2019, 19:40 IST
ಸುದರ್ಶನ್
ಸುದರ್ಶನ್   

ಬೆಂಗಳೂರು: ಚಿನ್ನಾಭರಣಗಳ ಮೇಲೆಅನಧಿಕೃತವಾಗಿ ‘ಹಾಲ್‌ಮಾರ್ಕ್‌’ ಚಿಹ್ನೆ ಮುದ್ರಿಸಿ ಮಾರುತ್ತಿದ್ದ ಆರೋಪದಡಿ ಸುದರ್ಶನ್ ಜೈನ್ (28) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಶಿವಾಜಿನಗರದಚಿನ್ನಸ್ವಾಮಿ ಮೊದಲಿಯಾರ್ ಸ್ಟ್ರೀಟ್‌ನಲ್ಲಿ ವಾಸವಿದ್ದ ಸುದರ್ಶನ್, ನಗರ್ತಪೇಟೆ ಕ್ರಾಸ್‌ ರಾಜರಾಜೇಶ್ವರಿ ಮಾರುಕಟ್ಟೆಯಲ್ಲಿ ‘ಆರ್.ಟಿ.ಎನ್ ಟೆಸ್ಟಿಂಗ್ ಮತ್ತು ಹಾಲ್‍ಮಾರ್ಕಿಂಗ್ ಸೆಂಟರ್’ ತೆರೆದಿದ್ದ. ಆತನ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರು ತಿಂಗಳಿನಿಂದ ಆರೋಪಿ, ಕೃತ್ಯ ಎಸಗುತ್ತಿದ್ದ. ಮಳಿಗೆ ಮೇಲೆ ದಾಳಿ ನಡೆಸಿ 60 ಗ್ರಾಂ ತೂಕದ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.