ಬೆಂಗಳೂರು: ಐಟಿಸಿ ಸಿಗರೇಟ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಸಿಗರೇಟ್ ಮಾರುತ್ತಿದ್ದ ಕೇರಳದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಿಶಾಂತ್ ಹಾಗೂ ಶಕೀಲ್ ಬಂಧಿತರು. ಇವರಿಂದ ₹40 ಲಕ್ಷ ಮೌಲ್ಯದ ಸಿಗರೇಟ್ ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಶಬ್ಬೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
‘ಪ್ರಮುಖ ಆರೋಪಿ ಪತ್ತೆಯಾದ ಮೇಲೆ ಪ್ರತಿಷ್ಠಿತ ಕಂಪನಿ ಹೆಸರು ಬಳಸಿ ಯಾವ ಸ್ಥಳದಲ್ಲಿ ನಕಲಿ ಸಿಗರೇಟ್ ತಯಾರಿಸಲಾಗುತ್ತಿತ್ತು. ಯಾವ ಸ್ಥಳಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಲಿದೆ. ನಕಲಿ ಸಿಗರೇಟ್ ಪೊಟ್ಟಣಗಳನ್ನು ಕಡಿಮೆ ದರಕ್ಕೆ ಆರೋಪಿಗಳು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಐಟಿಸಿ ಕಂಪನಿಯವರು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.