ಬೆಂಗಳೂರು: ಸಚಿವಾಲಯ ಸಹಕಾರ ಸಂಘಕ್ಕೆ 2025-2030ನೇ ಅವಧಿಗೆ ಅಧ್ಯಕ್ಷರಾಗಿ ಎಚ್. ಹನುಮೇಗೌಡ, ಉಪಾಧ್ಯಕ್ಷರಾಗಿ ಎಚ್.ಸಿ. ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಫೆ. 16ರಂದು ನಡೆದ ಚುನಾವಣೆಯಲ್ಲಿ ಹನುಮೇಗೌಡ ನೇತೃತ್ವದ ತಂಡ 11 ಸ್ಥಾನಗಳನ್ನು ಪಡೆದಿತ್ತು. ಸಂಘದ ಬೈ–ಲಾ ಪ್ರಕಾರ ಆಡಳಿತ ಮಂಡಳಿಯಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.