ADVERTISEMENT

ಕೇವಲ 10 ಸಾವಿರ ಸೀಟು ಭರ್ತಿ

ಎಂಜಿನಿಯರಿಂಗ್ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:50 IST
Last Updated 15 ಜುಲೈ 2019, 19:50 IST
   

ಬೆಂಗಳೂರು: ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಮೊದಲ ಸುತ್ತಿನ ಎಂಜಿನಿಯರಿಂಗ್‌ ಸೀಟುಗಳ ಆಯ್ಕೆ ಕೊನೆಗೊಂಡಿದ್ದು, ಕೇವಲ 10 ಸಾವಿರ ಎಂಜಿನಿಯರಿಂಗ್ ಸೀಟುಗಳು ಮಾತ್ರ ಭರ್ತಿಯಾಗಿವೆ.

ಕಳೆದ ವರ್ಷ 23 ಸಾವಿರ ಸೀಟುಗಳು ಭರ್ತಿಯಾಗದೆ ಹೋಗಿದ್ದವು. ಈ ವರ್ಷದ ಪರಿಸ್ಥಿತಿ ನೋಡಿದರೆ ಅದೇ ಪರಿಸ್ಥಿತಿ ಪುನರಾವರ್ತನೆಯಾಗುವ ಲಕ್ಷಣ ಕಾಣಿಸಿದೆ.

ರಾಜ್ಯದಲ್ಲಿ 200ಕ್ಕೂ ಅಧಿಕ ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳು ಸೇರಿ 59 ಸಾವಿರದಷ್ಟು ಸೀಟುಗಳು ಲಭ್ಯ ಇವೆ. ಈ ಬಾರಿ 10 ಸಾವಿರ ವಿದ್ಯಾರ್ಥಿಗಳು ಮಾತ್ರ ಕಾಲೇಜುಗಳಿಗೆ ಇದುವರೆಗೆ ಪ್ರವೇಶ ಪಡೆದಿದ್ದಾರೆ.

ADVERTISEMENT

ಇನ್ನು ಎರಡು ಮತ್ತು ಮೂರನೇ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಯುವುದು ಬಾಕಿ ಇದೆ. ಆದರೆ ಹಲವು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರ ಕೋರ್ಸ್‌ಗಳತ್ತ ಗಮನ ಹರಿಸಿದ್ದು, ಅಲ್ಲಿ ಸೀಟು ದೊರೆತರೆ ಎಂಜಿನಿಯರಿಂಗ್‌ ಸೀಟುಗಳನ್ನು ಬಿಡುತ್ತಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೇಳಾಪಟ್ಟಿಯಂತೆ ಜುಲೈ 12ರೊಳಗೆ ಮೊದಲ ಸುತ್ತಿನ ಎಂಜಿನಿಯರಿಂಗ್‌ ಕಾಲೇಜು ಪ್ರವೇಶ ಕೊನೆಗೊಳ್ಳಬೇಕು. ಇದುವರೆಗೆ 10 ಸಾವಿರ ವಿದ್ಯಾರ್ಥಿಗಳು ಮಾತ್ರ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.

ಸಿಇಟಿಯಲ್ಲಿ 5 ಸಾವಿರದವರೆಗೆ ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರು ಸೀಟು ಬಿಟ್ಟುಕೊಡುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ಆರಂಭದಲ್ಲೇ ಮೊದಲ 10 ರ‍್ಯಾಂಕ್‌ನ ಕಾಲೇಜುಗಳಲ್ಲಿನ ಸೀಟುಗಳು ಭರ್ತಿಯಾಗಿರುತ್ತವೆ. ಈ ಬಾರಿಯೂ ಅದೇ ಚಿತ್ರಣ ಇದೆ ಎಂದು ಪ್ರಾಧಿಕಾರಿದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.