ADVERTISEMENT

ಹಕ್ಕಿಪಿಕ್ಕಿ ಜನಾಂಗದ ಜೋಪಡಿಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:59 IST
Last Updated 21 ಅಕ್ಟೋಬರ್ 2022, 20:59 IST
ದೊಡ್ಡಗುಬ್ಬಿ ಕೆರೆಯ ಕೋಡಿ ಬಿದ್ದು ಕೆರೆಯ ಪ್ರದೇಶದಲ್ಲಿ ವಾಸವಿರುವ ಹಕ್ಕಿಪಿಕ್ಕಿ ಜನಾಂಗ ವಾಸಿಸುವ ಜೋಪಡಿಗಳಲ್ಲಿ ನೀರು ತುಂಬಿಕೊಂಡಿದೆ
ದೊಡ್ಡಗುಬ್ಬಿ ಕೆರೆಯ ಕೋಡಿ ಬಿದ್ದು ಕೆರೆಯ ಪ್ರದೇಶದಲ್ಲಿ ವಾಸವಿರುವ ಹಕ್ಕಿಪಿಕ್ಕಿ ಜನಾಂಗ ವಾಸಿಸುವ ಜೋಪಡಿಗಳಲ್ಲಿ ನೀರು ತುಂಬಿಕೊಂಡಿದೆ   

ಕೆ.ಆರ್.ಪುರ: ಮಳೆಗೆ ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಕೆರೆಯ ಕೋಡಿ ಬಿದ್ದು ಕೆರೆಯ ಆಸುಪಾಸಿನಲ್ಲಿ ನೆಲೆಸಿರುವ ಹಕ್ಕಿಪಿಕ್ಕಿ ಜನಾಂಗದ ಜೋಪಡಿಗಳಿಗೆ ನೀರು ನುಗ್ಗಿದೆ. ಅವರ ಬದುಕು ದುಸ್ತರವಾಗಿದೆ.

ಜೋಪಡಿಗಳಿಗೆ ನೀರು ನುಗ್ಗಿದರಿಂದ ದವಸ–ಧಾನ್ಯಗಳು ಹಾಳಾಗಿವೆ. ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಜೋಪಡಿ ಪ್ರದೇಶದಲ್ಲಿ ನೀರು ಹೆಚ್ಚಾಗಿ ತುಂಬಿಕೊಂಡಿದ್ದರಿಂದ ಜನರು ಗುಡಿಸಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೋಡಿ ನೀರು ಹರಿಯುವ ಮಾರ್ಗದ ಮೂಲಕವೇ ಜೋಪಡಿಗಳಿಗೆ ತೆರಳಬೇಕು. ಕೆಲವೊಮ್ಮೆ ನಿವಾಸಿಗಳು ಬಿದ್ದು ಗಾಯಗೊಂಡಿರುವ ನಿರ್ದೇಶನವು ಇದೆ ಎಂದು ನಿವಾಸಿಗಳು ಹೇಳಿದ್ದಾರೆ.

40 ವರ್ಷದಿಂದ ದೊಡ್ಡ ಗುಬ್ಬಿ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡು ಸರ್ಕಾರದ ಭೂಮಿಯಲ್ಲಿ ವಾಸಿಸುತ್ತಿದ್ದೆವು. ಅದರೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಕ್ಕಲೆಬ್ಬಿಸುತ್ತಿದ್ದಾರೆ. ನೆರೆಯಿಂದ ವಿಷಜಂತುಗಳು ಬರುತ್ತಿವೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದರು. 15 ವರ್ಷದಿಂದ ಶ್ವಾಶತ ಸೂರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ‌ಅಧಿಕಾರಿಗಳು ಸ್ವಂದಿಸುತ್ತಿಲ್ಲ. ಪ್ರತಿಸಲ ಮಳೆ ಬಂದಾಗಲು ನಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಕಿಸುವಂತಾಗಿದೆ. ಇಲ್ಲಿ ನಮಗೆ ಯಾವುದೇ ರೀತಿಯ ಮೂಲ ಸೌಕರ್ಯಗಳಾದ ರಸ್ತೆ-ವಿದ್ಯುತ್ ಇಲ್ಲದೆ ಪರದಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.