ADVERTISEMENT

ಬಾಗಲೂರು ಮೆಟ್ರೊ ನಿಲ್ದಾಣದ ಪಿಲ್ಲರ್‌ಗೆ ಅಡಿಪಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 18:57 IST
Last Updated 24 ಜೂನ್ 2022, 18:57 IST
ಬಾಗಲೂರು ಮೆಟ್ರೊ ರೈಲು ನಿಲ್ದಾಣದ ಮೊದಲ ಪಿಲ್ಲರ್ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು
ಬಾಗಲೂರು ಮೆಟ್ರೊ ರೈಲು ನಿಲ್ದಾಣದ ಮೊದಲ ಪಿಲ್ಲರ್ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು   

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ರೈಲು ಕಾಮಗಾರಿ ಚುರುಕು ಪಡೆದಿದ್ದು, ಬಾಗಲೂರು ನಿಲ್ದಾಣದ ಮೊದಲ ಪಿಲ್ಲರ್ ನಿರ್ಮಾಣಕ್ಕೆ ಗುರುವಾರ ಅಡಿಪಾಯ ಹಾಕಲಾಯಿತು.

ಮೆಟ್ರೊ ರೈಲು ಮಾರ್ಗದ ಸಿವಿಲ್ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌), ಚಿಕ್ಕಜಾಲ ಬಳಿ ಮೊದಲ ಪಿಲ್ಲರ್ ನಿರ್ಮಾಣ ಕಾಮಗಾರಿಯನ್ನು ಮೇ 10ರಂದು ಆರಂಭಿಸಿತ್ತು. ಪಿಲ್ಲರ್‌ಗಳ ಮೇಲೆ ‘ಯು’ ಆಕಾರದ ಗರ್ಡರ್‌ ಅಳವಡಿಕೆ ಕಾರ್ಯವನ್ನು ಕಳೆದ ವಾರ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT