ADVERTISEMENT

ವಿಮರ್ಶೆಗೆ ಗಂಭೀರ ಸ್ವರೂಪ ನೀಡಿದ ಗಿರಡ್ಡಿ

ಡಾ.ಸಿ.ಎನ್. ರಾಮಚಂದ್ರನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:48 IST
Last Updated 11 ಮೇ 2019, 19:48 IST
ಸಿ.ಎನ್‌. ರಾಮಚಂದ್ರನ್‌ ಮಾತನಾಡಿದರು -ಪ್ರಜಾವಾಣಿ ಚಿತ್ರ
ಸಿ.ಎನ್‌. ರಾಮಚಂದ್ರನ್‌ ಮಾತನಾಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಮರ್ಶೆ ಎನ್ನುವುದು ಕೇವಲ ಕೃತಿಯ ಮೌಲ್ಯಮಾಪನ ಎನ್ನುವ ಕಾಲದಲ್ಲಿ ಈ ಪ್ರಕಾರಕ್ಕೆ ಗಂಭೀರ ಸ್ವರೂಪ ನೀಡಿದವರು ಗಿರಡ್ಡಿ ಗೋವಿಂದರಾಜು’ ಎಂದು ವಿಮರ್ಶಕಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಶನಿವಾರಆಯೋಜಿಸಿದ್ದ ಕಾರ್ಯಕ್ರಮದಲ್ಲಿ‘ಕನ್ನಡ ಸಾಹಿತ್ಯಕ್ಕೆ ಗಿರಡ್ಡಿ ಗೋವಿಂದರಾಜು ಅವರ ಕೊಡುಗೆ’ ವಿಷಯದ ಕುರಿತು ಮಾತನಾಡಿದರು.

‘ಬಹುಮುಖ ವ್ಯಕ್ತಿತ್ವದ ವಿಮರ್ಶಕ ಗಿರಡ್ಡಿ ಅವರು ಕಥೆ, ಕಾವ್ಯ ಸೇರಿದಂತೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ನವ್ಯದ ಕಾಲದಲ್ಲಿ ಗಂಭೀರ ಸಾಹಿತ್ಯ ಇರದಿದ್ದರೂ ತಮ್ಮ ಬರವಣಿಗೆಚಾತುರ್ಯ ಮೂಲಕ ಅನೇಕ ಭಾವನೆಯನ್ನು ಕೃತಿಗಳಲ್ಲಿ ಹೊರಹಾಕುತ್ತಿದ್ದರು. ತಮ್ಮ ಕಾಲದ ಬಹುತೇಕ ಸಾಹಿತಿಗಳ ಕೃತಿಯನ್ನು ವಸ್ತುನಿಷ್ಠವಾಗಿ ವಿಮರ್ಶೆಗೆ ಒಳಪಡಿಸಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅವಶ್ಯಕತೆಯನ್ನು ಹೆಕ್ಕಿ ತೆಗೆದಿದ್ದಾರೆ’ಎಂದು ತಿಳಿಸಿದರು.

ADVERTISEMENT

‘ಬಹುತೇಕರು ವ್ಯವಸ್ಥೆಯ ಲೋಪದೋಷಗಳನ್ನು ಟೀಕಿಸುತ್ತಾ, ಸಮಸ್ಯೆಗಳನ್ನು ನಿವಾರಿಸಲು ಮಹಾಪುರುಷರ ಆಗಮನಕ್ಕೆ ಎದುರುನೋಡುತ್ತಾರೆ. ಆದರೆ, ತಾವೇ ಮಹಾಪುರುಷರಾಗಲು ಇಚ್ಛಿಸುವುದಿಲ್ಲ. ಈ ಸಂಗತಿಯನ್ನು ಗಿರಡ್ಡಿ ಅವರು ಕೂಡ ಉಲ್ಲೇಖಿಸಿದ್ದಾರೆ’ ಎಂದರು.

ಬಳಿಕ ಜಯಂತಿ ನಾಯ್ಕ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

‘ಗಿರಡ್ಡಿ ಅವರು ವಿಮರ್ಶೆಯಲ್ಲಿ ಪ್ರಧಾನವಾಗಿ ಜೀವನಮೌಲ್ಯಗಳನ್ನು ಹುಡುಕುತ್ತಿದ್ದರು. ಹೀಗಾಗಿಯೇ ಎಸ್‌.ಎಲ್‌. ಭೈರಪ್ಪ ಅವರ ಕೆಲ ಕಾದಂಬರಿಗಳು ಜೀವ ವಿರೋಧಿ ಮೌಲ್ಯವನ್ನು ಹೊಂದಿವೆ ಎನ್ನುವುದನ್ನು ವಿಮರ್ಶೆಯಲ್ಲಿಯೇ ಉಲ್ಲೇಖಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.