ADVERTISEMENT

ರಾಜರಾಜೇಶ್ವರಿನಗರ | ’ಹೊಸ ಆವಿಷ್ಕಾರಗಳತ್ತ ಗಮನ ಹರಿಸಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 16:26 IST
Last Updated 15 ಏಪ್ರಿಲ್ 2025, 16:26 IST
ಮಳಿಗೆಯೊಂದರಲ್ಲಿ ಪ್ರದರ್ಶಿಸಿದ್ದ ಪ್ರಯೋಗಗಳನ್ನು ಪ್ರಾಚಾರ್ಯ ಡಾ.ಎಂ.ಎಸ್.ತಿಪ್ಪೇಸ್ವಾಮಿ, ಉಪಪ್ರಾಂಶುಪಾಲ ಡಾ.ಸಿದ್ದರಾಜು ಮತ್ತಿತರರು ಭೇಟಿ ನೀಡಿದರು.
ಮಳಿಗೆಯೊಂದರಲ್ಲಿ ಪ್ರದರ್ಶಿಸಿದ್ದ ಪ್ರಯೋಗಗಳನ್ನು ಪ್ರಾಚಾರ್ಯ ಡಾ.ಎಂ.ಎಸ್.ತಿಪ್ಪೇಸ್ವಾಮಿ, ಉಪಪ್ರಾಂಶುಪಾಲ ಡಾ.ಸಿದ್ದರಾಜು ಮತ್ತಿತರರು ಭೇಟಿ ನೀಡಿದರು.   

ರಾಜರಾಜೇಶ್ವರಿನಗರ: ‘ವಿಜ್ಞಾನ, ತಂತ್ರಜ್ಞಾನ ಮಾಹಿತಿ ತಂತ್ರಜ್ಞಾನ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು’ ಎಂದು ಪಾಂಚಜನ್ಯ ವಿದ್ಯಾಪೀಠದ ಅಧ್ಯಕ್ಷ ಎಸ್.ಮರಿಸ್ವಾಮಿ ತಿಳಿಸಿದರು.

ನಾಗರಬಾವಿಯ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 9ನೇ ವರ್ಷದ ರಾಷ್ಟ್ರೀಯ ತಾಂತ್ರಿಕ ಪ್ರದರ್ಶನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ವಿಜ್ಞಾನ–ತಂತ್ರಜ್ಞಾನ ಯುಗದಲ್ಲಿದ್ದೇವೆ. ಯುವ ಸಮೂಹ, ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರೋಗ್ಯ, ಶಿಕ್ಷಣ, ವ್ಯವಸಾಯ, ಕೈಗಾರಿಕೆಗಳ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪಾಂಚಜನ್ಯ ವಿದ್ಯಾಪೀಠ ಧರ್ಮದತ್ತಿಯ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಮಹಾದೇವ ಮಾತನಾಡಿ, ‘ಎಲ್ಲ ರಂಗಗಳಲ್ಲೂ ಸ್ಪರ್ಧೆ ಇದೆ. ತಂತ್ರಜ್ಞಾನ ವೈದ್ಯಕೀಯ ಸಂಶೋಧನಾ ವಿದ್ಯಾರ್ಧಿಗಳು, ಸಂಶೋಧನೆ ಅವಿಷ್ಕಾರಗಳತ್ತ ಹೆಚ್ಚು ಗಮನ ಹರಿಸಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.

ದತ್ತಿಯ ಟ್ರಸ್ಟಿ ಎಸ್.ಶಿವಮಲ್ಲು, ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಸ್.ತಿಪ್ಪೇಸ್ವಾಮಿ, ಉಪಪ್ರಾಂಶುಪಾಲ ಡಾ.ಸಿದ್ದರಾಜು ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.