ADVERTISEMENT

₹480 ಕೋಟಿ ಬಂಡವಾಳ ಹೂಡಿಕೆ ಸರ್ಕಾರ ಅನುಮತಿ

ಗುಡ್‌ರಿಚ್ ಏರೋಸ್ಪೇಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:53 IST
Last Updated 3 ಆಗಸ್ಟ್ 2019, 19:53 IST

ಬೆಂಗಳೂರು:ಗುಡ್‌ರಿಚ್ ಏರೋಸ್ಪೇಸ್ ಸರ್ವೀಸ್ ಪೈವೇಟ್ ಲಿಮಿಟೆಡ್ ಕಂಪನಿಯವರು ₹ 480 ಕೋಟಿ ಬಂಡವಾಳ ಹೂಡಿಕೆ ಮಾಡಿ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಗಳ ಉತ್ಪಾದನಾ ವ್ಯವಸ್ಥೆಗಳ ಘಟಕ ಸ್ಥಾಪನೆ ಮಾಡಲು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಅನುಮೋದನೆ ನೀಡಿದ್ದಾರೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಸ್ಥಾಪಿಸಲಿರುವ ವಿಸ್ತರಣಾ ಘಟಕವು ಕರ್ನಾಟಕವನ್ನು ಜಾಗತಿಕ ಮಟ್ಟದ ವೈಮಾನಿಕ ಕ್ಷೇತ್ರದಲ್ಲಿ ಮೇಲ್ಮಟ್ಟಕ್ಕೆ ಕೊಂಡೊಯ್ಯಲಿದ್ದು,ಸುಮಾರು 4 ಸಾವಿರ ಜನರಿಗೆ ಉದ್ಯೋಗಾ
ವಕಾಶ ಕಲ್ಪಿಸಿಕೊಡಲಿದೆ.

ಸರ್ಕಾರ ಈ ಯೋಜನೆಗೆ ಹಲವು ಮೂಲಸೌಲಭ್ಯ,ಪ್ರೋತ್ಸಾಹ ಹಾಗೂ ರಿಯಾಯಿತಿ ನೀಡಲಿದೆ.

ADVERTISEMENT

ಹಿನ್ನೆಲೆ:1996ರಿಂದ ಸಂಸ್ಥೆಯು ಭಾರತದಲ್ಲಿ ವಿಮಾನ ತಯಾರಿಕೆಗೆ ಬೇಕಾದ ಬಿಡಿ ಭಾಗಗಳ ತಯಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದು, ಬೆಂಗಳೂರಿನ ವೈಟ್‌ಫಿಲ್ಡ್ ಪ್ರದೇಶದ 3 ಬೇರೆ ಬೇರೆ ಸ್ಥಳಗಳಲ್ಲಿ ಕೈಗಾರಿಕೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.