ಯಲಹಂಕ: ಅರಕೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕೆ.ಎಂ.ಅರಸೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ನೇತ್ರಾವತಿ ಅಂಬರೀಶ್ ಬಾಬು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕಾಗಿ ಶುಕ್ರವಾರ ಚುನಾವಣೆ ನಡೆಯಿತು. ಒಟ್ಟು 21 ಸದಸ್ಯಬಲ ಹೊಂದಿರುವ ಪಂಚಾಯಿತಿಯಲ್ಲಿ ಅರಸೇಗೌಡ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ರಾಜ್ಯರೈತ ಮೋರ್ಚಾ ಕಾರ್ಯದರ್ಶಿ ಸತೀಶ್ ಕಡತನಮಲೆ, ಗ್ರಾಮಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಮುನಿಲಕ್ಷ್ಮಮ್ಮ ಪರಶುರಾಂ, ಬಿ.ಸಿ.ಶಶಿಕುಮಾರ್, ಲಕ್ಷ್ಮೀನಾರಾಯಣಗೌಡ, ಸದಸ್ಯರಾದ ನೇತ್ರಾವತಿ, ಶಿಲ್ಪ ರಾಜಣ್ಣ, ಪದ್ಮ ಮುನಿಕೃಷ್ಣಪ್ಪ, ಚನ್ನಪ್ಪ, ಎಸ್.ಮಂಜುನಾಥ್, ಸ್ಥಳೀಯ ಮುಖಂಡ ಮುನಿದಾಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.