ADVERTISEMENT

ಕೇಂದ್ರ ತಂಡದಿಂದ ಗ್ರಾ.ಪಂ ಅಭಿವೃದ್ಧಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:10 IST
Last Updated 1 ನವೆಂಬರ್ 2018, 19:10 IST
ನರಸೀಪುರ ಪಂಚಾಯಿತಿಯಲ್ಲಿ ಸ್ವಸಹಾಯ ಸಂಘದವರೊಂದಿಗೆ ಕೇಂದ್ರ ತಂಡದ ಮುಖ್ಯಸ್ಥ ಸುರೇಶ್‌ ಕುಮಾರ್‌ ಸಮಾಲೋಚನೆ ನಡೆಸಿದರು.
ನರಸೀಪುರ ಪಂಚಾಯಿತಿಯಲ್ಲಿ ಸ್ವಸಹಾಯ ಸಂಘದವರೊಂದಿಗೆ ಕೇಂದ್ರ ತಂಡದ ಮುಖ್ಯಸ್ಥ ಸುರೇಶ್‌ ಕುಮಾರ್‌ ಸಮಾಲೋಚನೆ ನಡೆಸಿದರು.   

ದಾಬಸ್‌ಪೇಟೆ: ಕೇಂದ್ರದ ಉಸ್ತುವಾರಿ ಸಮಿತಿ ಮುಖ್ಯಸ್ಥ ಸುರೇಶ್ ಕುಮಾರ್‌ ಮತ್ತು ಮೋಹನ್ ಕುಮಾರ್‌ ನೇತೃತ್ವದ ತಂಡದವರು ಸೋಮವಾರ ಮತ್ತು ಮಂಗಳವಾರದಂದು ಆಗಲಕುಪ್ಪೆ, ಹೊನ್ನೇನಹಳ್ಳಿ ಮತ್ತು ನರಸೀಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರು

ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಸ್ತ್ರೀಶಕ್ತಿ ಸ್ವಸಹಾಯ ಸಂಘ, ನರೇಗಾ, ಪ್ರಧಾನಮಂತ್ರಿ ಆವಾಸ್ ಯೋಜನೆಗಳಂತಹ, ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಹಾಗೂ ಸಮರ್ಪಕವಾಗಿ ಸಿಗುತ್ತವೆಯೇ ಅನ್ನುವುದರ ಬಗ್ಗೆ ತಂಡ ಕಡತಗಳನ್ನು ಪರಿಶೀಲಿಸಿ, ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿತು.

ಮನಸ್ವೀನಿ, ರಾಷ್ಟ್ರೀಯ ಕುಟುಂಬ ಯೋಜನೆ, ಮಾಸಾಶನ, ಸಂಧ್ಯಾ ಸುರಕ್ಷಾ ಯೋಜನೆಗಳ ಮಾಹಿತಿ ಪಡೆದುಕೊಂಡರು. ಯೋಜನೆಗಳಲ್ಲಿಯೂ ಲೋಪಗಳು ಇದ್ದದ್ದನ್ನು ಕಂಡು ಬೇಸರಗೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.