ADVERTISEMENT

10ಕ್ಕೆ ‘ಗುಡಿ ನಡೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:45 IST
Last Updated 6 ಏಪ್ರಿಲ್ 2021, 15:45 IST

ಬೆಂಗಳೂರು: ಯಕ್ಷಗಾನ ರಂಗದಲ್ಲಿ ಜನಪ್ರಿಯವಾಗಿರುವ ಬೆಂಗಳೂರಿನ ಕಲಾ ಕದಂಬ ಆರ್ಟ್‌ ಸೆಂಟರ್‌ ಇದೇ 10ರಂದು ‘ಗುಡಿ ನಡೆ’ ಶೀರ್ಷಿಕೆ ಅಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.

ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4ನೇ ವಿಭಾಗದಲ್ಲಿರುವ ಕಲಾಗುಡಿಯಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಇದರ ಅಂಗವಾಗಿ ದೇವಿದಾಸರ ‘ಕರ್ಣ ಭೇದನ’ (ತಾಳಮದ್ದಲೆ) ಕಥಾನಕ ಪ್ರದರ್ಶನಗೊಳ್ಳಲಿದೆ.

‘ಯಕ್ಷಗಾನದ ಹಿಮ್ಮೇಳದವರೇ ಪಾತ್ರಧಾರಿಗಳಾಗಿ ಮಾತಿನ ಮನೆ ಕಟ್ಟುವುದು ಈ ತಾಳಮದ್ದಲೆಯ ವೈಶಿಷ್ಟ್ಯ. ಯಕ್ಷಗಾನ ಕಲಾವಿದರಾದ ದೇವರಾಜ ಕರಬರು ಕಾರ್ಯಕ್ರಮದ ಸಂಯೋಜಕರಾಗಿದ್ದು, ರಾಧಾಕೃಷ್ಣ ಉರಾಳ ಅವರು ‘ಗುಡಿ ನಡೆ’ಯ ನಿರ್ದೇಶಕರು. ವಿದ್ವಾನ್‌ ಎ.ಪಿ.ಪಾಠಕ್‌, ಸುಬ್ರಾಯ ಹೆಬ್ಬಾರ, ಅಂಬರೀಷ್‌ ಭಟ್ ಹಾಗೂ ಪ್ರದೀಪ ಸಾಮಗ ಅವರು ಇದರಲ್ಲಿ ಪಾಲ್ಗೊಳ್ಳುವ ಕಲಾವಿದರಾಗಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಜಯರಾಮ ಅಡಿಗ, ರಂಗಭೂಮಿಯ ಹಿರಿಯ ಕಲಾವಿದ ಸಂಜಯ ಸೂರಿ ಹಾಗೂ ರಂಗಕರ್ಮಿ ಶಶಿಧರ ಬಾರಿಘಾಟ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ 9448510582.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.