ADVERTISEMENT

ಜಿಮ್ನಾಸ್ಟಿಕ್‌ ಸ್ಪರ್ಧೆ: ದೀಕ್ಷಾ, ಚಿರಂತ್ ಶೆಟ್ಟಿಗೆ ಪದಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 20:59 IST
Last Updated 13 ಡಿಸೆಂಬರ್ 2024, 20:59 IST
   

ಬೆಂಗಳೂರು: ರಾಜ್ಯಮಟ್ಟದ ಜಿಮ್ನಾಸ್ಟಿಕ್‌ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಚಂದ್ರಶೇಖರ್‌ ಜಿಮ್ನಾಸ್ಟಿಕ್‌ ಅಕಾಡೆಮಿಯ ದೀಕ್ಷಾ ಗಿನ್ನೀಸ್‌ ಗಿರೀಶ್, ಚಿರಂತ್ ವಿ. ಶೆಟ್ಟಿ ಜಯಗಳಿಸಿದ್ದಾರೆ.

ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಗಿನ್ನೀಸ್‌ಗಿರೀಶ್ ಬಾಲಕಿಯರ ವಿಭಾಗದಲ್ಲಿ ಟೇಬಲ್‌ ಓಲ್ಟ್‌ನಲ್ಲಿ ಪ್ರಥಮ, ಪ್ಲೋರ್‌ ಎಕ್ಸಸೈಸ್‌ನಲ್ಲಿ ಪ್ರಥಮ, ಅನ್ಇವನ್‌ ಬಾರ್ಸ್‌ನಲ್ಲಿ ಪ್ರಥಮ ಹಾಗೂ ಬ್ಯಾಲನ್ಸ್‌ ಬೀಮ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು. ಮೂರು ಚಿನ್ನದ ಪದಕಗಳು ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಎಂದು ಅಕಾಡೆಮಿಯ ತರಬೇತುದಾರ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಲಕರ ವಿಭಾಗದಲ್ಲಿ ಆರ್.ಎನ್. ಎಸ್. ಬಂಟ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಚಿರಂತ್ ವಿ. ಶೆಟ್ಟಿ ಪ್ಲೋರ್‌ ಎಕ್ಸಸೈಸ್‌ನಲ್ಲಿ ಪ್ರಥಮ, ಹೈಬಾರ್‌ನಲ್ಲಿ ಪ್ರಥಮ, ಟೇಬಲ್‌ ಓಲ್ಟ್‌ನಲ್ಲಿ ದ್ವಿತೀಯ, ಪೊಮೆಲ್ ಹಾರ್ಸ್‌ನಲ್ಲಿ ತೃತೀಯ ಸ್ಥಾನ ಪಡೆದು ದ್ವಿತೀಯ ಆಲ್‌ರೌಂಡರ್‌ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.