ADVERTISEMENT

ಹನಿಯೂರು: ಜಿಲ್ಲಾಧಿಕಾರಿಗಳಿಂದ ಇಂದು ಗ್ರಾಮವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 21:50 IST
Last Updated 19 ಫೆಬ್ರುವರಿ 2021, 21:50 IST
ಸೆಲ್ಕೊ ಸಂಸ್ಥೆ ವಿತರಿಸಿದ ರೊಟ್ಟಿ ತಯಾರಿಸುವ ಯಂತ್ರವನ್ನು ಉದ್ಘಾಟಿಸಲಾಯಿತು. ಹಿರಿಯ ಪತ್ರಕರ್ತೆಯರಾದ ಕೆ.ಎಚ್.ಸಾವಿತ್ರಿ, ಶಾಂತಲಾ ಧರ್ಮರಾಜ್, ಮಾಲತಿ ಭಟ್, ಭಾರತಿ ಹೆಗಡೆ, ಖುಷ್ಬೂ ಅಗರವಾಲ್‌ ಇದ್ದಾರೆ.
ಸೆಲ್ಕೊ ಸಂಸ್ಥೆ ವಿತರಿಸಿದ ರೊಟ್ಟಿ ತಯಾರಿಸುವ ಯಂತ್ರವನ್ನು ಉದ್ಘಾಟಿಸಲಾಯಿತು. ಹಿರಿಯ ಪತ್ರಕರ್ತೆಯರಾದ ಕೆ.ಎಚ್.ಸಾವಿತ್ರಿ, ಶಾಂತಲಾ ಧರ್ಮರಾಜ್, ಮಾಲತಿ ಭಟ್, ಭಾರತಿ ಹೆಗಡೆ, ಖುಷ್ಬೂ ಅಗರವಾಲ್‌ ಇದ್ದಾರೆ.   

ಯಲಹಂಕ: ಹೆಸರಘಟ್ಟ ಹೋಬಳಿ ಹನಿಯೂರು ಗ್ರಾಮದಲ್ಲಿ ಫೆಬ್ರುವರಿ 20ರಂದು (ಶನಿವಾರ) ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಗ್ರಾಮದ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶ. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ
ಎಂದರು.

ಗ್ರಾಮದಲ್ಲಿ ಸಸಿನೆಡುವುದರ ಜೊತೆಗೆ ಕೆರೆ, ಸ್ಮಶಾನ ಮತ್ತು ಗುಂಡುತೋಪು ಒತ್ತುವರಿ ತೆರವು ಹಾಗೂ ಕೆರೆ ಹೂಳುತೆಗೆಯುವ ಕಾರ್ಯಾಚರಣೆ ನಡೆಸಲಾಗುವುದು. ಅಲ್ಲದೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.