ADVERTISEMENT

ಹವ್ಯಕರು, ಬ್ರಾಹ್ಮಣರು ಒಗ್ಗೂಡಲಿ: ಎಸ್. ಗುರುಮೂರ್ತಿ ಅಭಿಮತ

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 22:35 IST
Last Updated 5 ಏಪ್ರಿಲ್ 2021, 22:35 IST
ಕಾರ್ಯಕ್ರಮದಲ್ಲಿ (ಮಧ್ಯದಲ್ಲಿ ಕುಳಿತವರು ಎಡದಿಂದ) ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ (ಹವ್ಯಕ ಶ್ರೀ 2021), ಗುರುಮೂರ್ತಿ ವೈದ್ಯ (ಹವ್ಯಕ ಶ್ರೀ 2020), ತೇಜಸ್ವಿ ಶಂಕರ್ (ಹವ್ಯಕ ಶ್ರೀ 2020), ಗಜಾನನ ಘನಪಾಠಿ (ಹವ್ಯಕ ಶ್ರೀ 2020), ರಾಮಚಂದ್ರ ಹೆಗಡೆ ಕೊಂಡದಕುಳಿ (ಹವ್ಯಕ ಭೂಷಣ 2020), ಬಂದಗದ್ದೆ ನಾಗರಾಜ (ಹವ್ಯಕ ವಿಭೂಷಣ 2020), ಡಾ.ಶ್ಯಾಮ್ ಸಿ. ಭಟ್ (ಹವ್ಯಕ ಭೂಷಣ 2020), ಡಾ.ಎಚ್.ಎಲ್.ಸುಬ್ಬರಾವ್ (ಹವ್ಯಕ ಭೂಷಣ 2021), ನಾಗರಾಜ ಹೆಗಡೆ ಗೊರನಮನೆ (ಹವ್ಯಕ ಭೂಷಣ 2021), ಚಂದ್ರಕಲಾ ವಿ. ಭಟ್ (ಹವ್ಯಕ ಶ್ರೀ 2021) ಮತ್ತು ಈಶಾ ಶರ್ಮ ಕಾಂತಜೆ (ಹವ್ಯಕ ಶ್ರೀ 2021) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಲ್ಲವ ಪುರಸ್ಕಾರ ಪಡೆದವರು (ಮೊದಲ ಸಾಲು; ಎಡದಿಂದ) ನಂದನ ಎನ್. ಹೆಗಡೆ, ಡಾ.ವಿ. ಸ್ನೇಹ, ಹೇಮಸ್ವಾತಿ ಕುರಿಯಾಜೆ, ಸಂಜನಾಭಟ್, ಎಂ.ಎನ್.ಗುರುಪ್ರಸಾದ್ ಮತ್ತು ಪ್ರಜ್ಞಾ ಪಿ. ಶರ್ಮ. (ಹಿಂದಿನ ಸಾಲು) ಸಂಸ್ಥಾಪನೋತ್ಸವ ಸಮಿತಿ ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ, ವಿಶೇಷ ಪ್ರಶಸ್ತಿ ಸಂಚಾಲಕ ರವಿನಾರಾಯಣ ಪಟ್ಟಾಜೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್. ಗುರುಮೂರ್ತಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಮತ್ತು ಪ್ರಧಾನ ಕಾರ್ಯದರ್ಶಿ ವೇಣುವಿಜ್ಞೇಶ ಇದ್ದಾರೆ -     –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ‍್ರಸ್ತುತ ಪರಿಸ್ಥಿತಿಯಲ್ಲಿ ಹವ್ಯಕರು ಹಾಗೂ ಬ್ರಾಹ್ಮಣರು ಒಗ್ಗೂಡುವುದು ಅನಿವಾರ್ಯ’ ಎಂದು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್‌.ಗುರುಮೂರ್ತಿ ಅಭಿಪ್ರಾಯ ಪಟ್ಟರು.

ಅಖಿಲ ಹವ್ಯಕ ಮಹಾಸಭಾ ಭಾನುವಾರ ಆಯೋಜಿಸಿದ್ದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೇರೆಯವರನ್ನು ದ್ವೇಷಿಸುವ ಸಮಾಜ ನಮ್ಮದಲ್ಲ. ನಾವು ಇತರ ಸಮುದಾಯಗಳಿಗೆ ಮಾರ್ಗದರ್ಶನ ಮಾಡುವವರು. ಸಮುದಾಯದ ಹಿತ ಹಾಗೂ ನಮ್ಮ ತನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹವ್ಯಕರು ಮತ್ತು ಬ್ರಾಹ್ಮಣರು ಒಟ್ಟಾಗಬೇಕಿದೆ’ ಎಂದರು.

ADVERTISEMENT

‘ಹವ್ಯಕರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಸಮಾಜಕ್ಕೆ ವಿಶಿಷ್ಠ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹವ್ಯಕರು ಮೂಲತಃ ಕೃಷಿಕರಾದರು ಕೂಡ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡಿ ಸಮಾಜದಲ್ಲಿ ಗೌರವಯುತವಾದ ಬದುಕು ಸಾಗಿಸುತ್ತಿದ್ದಾರೆ. ದಿವಂಗತ ರಾಮಕೃಷ್ಣ ಹೆಗಡೆ, ದತ್ತಾತ್ರೇಯ ಹೊಸಬಾಳೆ, ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಅನೇಕರ ಸಾಧನೆ ನಮಗೆ ಪ್ರೇರಣೆ. ಅವರು ನಮಗೆ ದಾರಿ ದೀಪವಾಗಿದ್ದಾರೆ’ ಎಂದು ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ‘ವಿಶ್ವದಲ್ಲಿ ಒಟ್ಟು 4 ಲಕ್ಷ ಮಂದಿ ಹವ್ಯಕರಿದ್ದಾರೆ. ಈ ಪೈಕಿ ಯಾರೂ ಶಿಕ್ಷಣದಿಂದ ವಂಚಿತರಾಗಿಲ್ಲ. ಹೀಗಾಗಿ ನಮ್ಮಲ್ಲಿ ಪ್ರತಿಭಾನ್ವಿತರ ದೊಡ್ಡ ದಂಡೇ ಇದೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದರಿಂದ ಉಳಿದವರಿಗೂ ಸ್ಫೂರ್ತಿ ಬರುತ್ತದೆ. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಲು ಇದರಿಂದ ಅನುಕೂಲವಾಗುತ್ತದೆ’ ಎಂದರು.

‘ಈ ಪ್ರಶಸ್ತಿ ನಮಗೆ ಸಲ್ಲಬೇಕಾ ದದ್ದಲ್ಲ. ಇದು ಪರಂಪರೆಗೆ ಕೊಟ್ಟ ಗೌರವ. ಈ ಪರಂಪರೆ ಹೀಗೆ ಮುಂದುವರಿಯಬೇಕು’ ಎಂದು 2020ನೇ ಸಾಲಿನ ಹವ್ಯಕ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್‌ ಬಂದಗದ್ದೆ ನಾಗರಾಜ ಹೇಳಿದರು.

2020ನೇ ಸಾಲಿನ ಹವ್ಯಕ ಭೂಷಣ ಪ್ರಶಸ್ತಿ ಪಡೆದ ಡಾ.ಶ್ಯಾಮ್‌ ಸಿ.ಭಟ್‌ ‘ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇನ್ನಷ್ಟು ಸಂಶೋಧನೆ ಗಳನ್ನು ಕೈಗೊಳ್ಳಲು, ಉತ್ತಮ ಕಾರ್ಯ ಗಳನ್ನು ಮಾಡಲು ಈ ಪುರಸ್ಕಾರ ಪ್ರೇರಣೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.