ADVERTISEMENT

2020ರ ವೇಳೆ ಅಂಧತ್ವ ಪ್ರಮಾಣ ಶೇ 0.3ಕ್ಕೆ ಇಳಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 20:07 IST
Last Updated 8 ಅಕ್ಟೋಬರ್ 2019, 20:07 IST
   

ಬೆಂಗಳೂರು: ‘ಕೇಂದ್ರ ಸರ್ಕಾರದ ರಾಷ್ಟ್ರೀಯ ಸಮೀಕ್ಷೆ 2006-07ರ ಪ್ರಕಾರ ಅಂಧತ್ವ ಪ್ರಮಾಣ ಶೇ 1ಕ್ಕೆ ಇಳಿಕೆಯಾಗಿದ್ದು, 2020ರ ವೇಳೆಗೆ ಶೇ 0.3ಕ್ಕೆ ಇಳಿಸುವ ಗುರಿ ಹೊಂದ ಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಮತ್ತು ದೃಷ್ಟಿಮಾಂದ್ಯತೆ ಕಾರ್ಯಕ್ರಮ ದಡಿ ಗುರುವಾರ (ಅ.10) ರಾಜ್ಯ ದಾದ್ಯಂತ ‘ದೃಷ್ಟಿ ಮೊದಲು' ಘೋಷ ವಾಕ್ಯದಡಿ 20ನೇ ವಿಶ್ವ ದೃಷ್ಟಿದಿನ ಆಚರಿಸಲಾಗುತ್ತದೆ.

‘ದೃಷ್ಟಿ ಸಮಸ್ಯೆಗಳಾದ ಗ್ಲಾಕೋಮ, ಡಯಾಬಿಟಿಕ್ ರೆಟಿನೋಪಥಿ, ಮೆಳ್ಳೆ ಗಣ್ಣು ಸೇರಿದಂತೆ ಕಣ್ಣಿನ ವಿವಿಧ ಸಮಸ್ಯೆ ಹಾಗೂ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಕಣ್ಣಿನ ಸಮಸ್ಯೆಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಸರ್ಕಾರೇತರ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಶಾಲಾ ಮಕ್ಕಳ ಕಣ್ಣಿನ ತಪಾಸಣೆ ನಡೆಸಿ ದೃಷ್ಟಿ ದೋಷವಿರುವ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಗುತ್ತದೆ’ ಎಂದು ಇಲಾಖೆ ಮಾಹಿತಿ ನೀಡಿದೆ.

ADVERTISEMENT

‘ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೂ ಉಚಿತ ಕನ್ನಡಕ ನೀಡಲಾಗುತ್ತದೆ. ನೇತ್ರದಾನ ಉತ್ತೇಜಿಸಲು ನೇತ್ರ ಭಂಡಾರ ಹಾಗೂ ನೇತ್ರ ಸಂಗ್ರಹಣಾ ಕೇಂದ್ರಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.