ADVERTISEMENT

ಆರೋಗ್ಯ ಸೇವೆ: ಭರವಸೆ ಮೂಡಿಸಿದ ‘ಜನ ಸೇವಕ’

ಒಂದೇ ತಿಂಗಳಲ್ಲಿ 39 ಸಾವಿರ ಆರೋಗ್ಯ ಕಾರ್ಡ್‌ಗಳ ವಿತರಣೆ

ವರುಣ ಹೆಗಡೆ
Published 4 ಮಾರ್ಚ್ 2020, 20:24 IST
Last Updated 4 ಮಾರ್ಚ್ 2020, 20:24 IST
ಫಲಾನುಭವಿಯೊಬ್ಬರಿಗೆ ಜನಸೇವಕ ಸಿಬ್ಬಂದಿಯೊಬ್ಬರು ‘ಆರೋಗ್ಯ ಕಾರ್ಡ್’ ವಿತರಿಸಿದರು
ಫಲಾನುಭವಿಯೊಬ್ಬರಿಗೆ ಜನಸೇವಕ ಸಿಬ್ಬಂದಿಯೊಬ್ಬರು ‘ಆರೋಗ್ಯ ಕಾರ್ಡ್’ ವಿತರಿಸಿದರು   

ಬೆಂಗಳೂರು: ‘ಜನ ಸೇವಕ’ ಯೋಜನೆಯಡಿ ಒಂದೇ ತಿಂಗಳಲ್ಲಿ 39,126 ಮಂದಿ ಮನೆಯಲ್ಲಿಯೇ ಆರೋಗ್ಯ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

ಜನರ ಮನೆ ಬಾಗಿಲಿಗೇಸಕಾಲ ಸೇವೆಯನ್ನು ಒದಗಿಸುವ ಉದ್ದೇಶದಿಂದ ‘ಜನ ಸೇವಕ’ ಯೋಜನೆಯನ್ನು ವರ್ಷದ ಹಿಂದೆ ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿತ್ತು. ಆರೋಗ್ಯ, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ 53 ಸೇವೆಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತಿದೆ. 2020ರ ಫೆ.4ರಂದು ರಾಜಾಜಿನಗರ, ಮಹಾದೇವಪುರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಲಾಗಿತ್ತು.

‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿಬಿಪಿಎಲ್ ಪಡಿತರ ಕಾರ್ಡು ಹೊಂದಿರುವ ಫಲಾನುಭವಿಗಳಿಗೆ ವರ್ಷಕ್ಕೆ ₹ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ 30 ರಷ್ಟು ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ವಾರ್ಷಿಕ ಪ್ರತಿ ಕುಟುಂಬ ₹1.50 ಲಕ್ಷ ವರೆಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ADVERTISEMENT

ಈ ಸೌಲಭ್ಯವನ್ನು ಪಡೆಯಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ಆರೋಗ್ಯ ಕಾರ್ಡ್‌ಗಳನ್ನು ಹೊಂದಿರಬೇಕು. ಆದರೆ, ನಿಗದಿತ ಕೇಂದ್ರಗಳಲ್ಲಿ ಗಂಟೆಗಟ್ಟಲೆ ನಿಂತು, ಕಾರ್ಡ್‌ಗಳನ್ನು ಪಡೆಯುವುದುವೃದ್ಧರು, ಮಹಿಳೆಯರು ಮತ್ತು ಉದ್ಯೋಗಿಗಳಿಗೆ ಸಮಸ್ಯೆಯಾಗಿತ್ತು. ಈಗ ಮನೆಯಲ್ಲಿಯೇ ಕುಳಿತು, ಕಾರ್ಡ್‌ಗಳಿಗೆ ಕೋರಿಕೆ ಸಲ್ಲಿಸುತ್ತಿದ್ದಾರೆ.

ನಗರದಲ್ಲಿ ಬೆಂಗಳೂರು ಒನ್ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಪೇಪರ್‌ ಕಾರ್ಡ್‌ಗಳಿಗೆ ₹ 10 ಹಾಗೂ ಪ್ಲಾಸ್ಟಿಕ್ ಕಾರ್ಡ್‌ಗಳಿಗೆ ₹ 35 ನಿಗದಿಪಡಿಸಲಾಗಿದೆ. ಜನಸೇವಕ ಯೋಜನೆಯಡಿ ಕಾರ್ಡ್‌ಗಳಿಗೆ ಬೇಡಿಕೆ ಸಲ್ಲಿಸಿದವರಿಗೆ ಈ ದರದ ಜತೆಗೆ ಬಳಕೆದಾರರ ಶುಲ್ಕವಾಗಿ ₹ 115 ಪಡೆಯಲಾಗುತ್ತಿದೆ. ಈ ಸೇವೆ ಪಡೆಯಲು ಇಚ್ಛಿಸಿದವರಬೆರಳಚ್ಚು ಗುರುತಿನ (ಬಯೋಮೆಟ್ರಿಕ್) ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಜನಸೇವಕರು ಪಡೆದು, ಕಾರ್ಡ್‌ಗಳನ್ನು ವಿತರಿಸುತ್ತಿದ್ದಾರೆ.

ಸೇವೆ ವಿಸ್ತರಣೆಗೆ ಕ್ರಮ: ‘ಆರೋಗ್ಯ ಕಾರ್ಡ್‌ ಸೇರಿದಂತೆ ವಿವಿಧ ಸೇವೆಗಳು ಸುಲಭವಾಗಿ ದೊರೆಯುವಂತಾಗಬೇಕೆಂಬ ಉದ್ದೇಶದಿಂದ ಈ ಯೋಜನೆ ಪ್ರಾರಂಭ ಮಾಡಲಾಗಿದೆ.ನಗರದ ಸಂಚಾರ ದಟ್ಟಣೆ, ಅನಾರೋಗ್ಯ ಸಹಿತ ಹಲವಾರು ಸಮಸ್ಯೆಗಳ ಕಾರಣಗಳಿಂದಾಗಿ ಜನರಿಗೆ ಕಚೇರಿಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಜನಸೇವಕ ಈ ಸಮಸ್ಯೆಗಳ ಕಾರಣದಿಂದ ಜನ ಸೌಲಭ್ಯ ವಂಚಿತರಾಗುವುದನ್ನು ತಪ್ಪಿಸಿದೆ. ಯೋಜನೆಯಡಿ ಆಧಾರ್ ಕಾರ್ಡ್‌ ಸೇರಿದಂತೆ ಇನ್ನಷ್ಟು ಸೇವೆಗಳನ್ನು ಸೇರಿಸುವಂತೆ ನಾಗರಿಕರು ಮನವಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ’ ಎಂದುಜನಸೇವಕಯೋಜನಾ ನಿರ್ದೇಶಕ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ನಗರದ ವಿವಿಧೆಡೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೇರಿದಂತೆ ಎರಡನೇ ಹಂತದ ನಗರಗಳಿಗೂ ವಿಸ್ತರಿಸುವ ಚಿಂತನೆಯಿದೆ’ ಎಂದರು.

‘ಸೇವೆ ವಿಸ್ತರಣೆಗೆ ಕ್ರಮ’
‘ಆರೋಗ್ಯ ಕಾರ್ಡ್‌ ಸೇರಿದಂತೆ ವಿವಿಧ ಸೇವೆಗಳು ಸುಲಭವಾಗಿ ದೊರೆಯುವಂತಾಗಬೇಕೆಂಬ ಉದ್ದೇಶದಿಂದ ಈ ಯೋಜನೆ ಪ್ರಾರಂಭ ಮಾಡಲಾಗಿದೆ.ನಗರದ ಸಂಚಾರ ದಟ್ಟಣೆ, ಅನಾರೋಗ್ಯ ಸಹಿತ ಹಲವಾರು ಸಮಸ್ಯೆಗಳ ಕಾರಣಗಳಿಂದಾಗಿ ಜನರಿಗೆ ಕಚೇರಿಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಜನಸೇವಕ ಈ ಸಮಸ್ಯೆಗಳ ಕಾರಣದಿಂದ ಜನ ಸೌಲಭ್ಯ ವಂಚಿತರಾಗುವುದನ್ನು ತಪ್ಪಿಸಿದೆ. ಯೋಜನೆಯಡಿ ಆಧಾರ್ ಕಾರ್ಡ್‌ ಸೇರಿದಂತೆ ಇನ್ನಷ್ಟು ಸೇವೆಗಳನ್ನು ಸೇರಿಸುವಂತೆ ನಾಗರಿಕರು ಮನವಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ’ ಎಂದುಜನಸೇವಕಯೋಜನಾ ನಿರ್ದೇಶಕ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ನಗರದ ವಿವಿಧೆಡೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೇರಿದಂತೆ ಎರಡನೇ ಹಂತದ ನಗರಗಳಿಗೂ ವಿಸ್ತರಿಸುವ ಚಿಂತನೆಯಿದೆ’ ಎಂದರು.

**

ಕೇಂದ್ರಗಳಿಗೆ ಹೋಗಿ ಆರೋಗ್ಯ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮನೆಯಲ್ಲಿಯೇ ಆನ್‌ಲೈನ್‌ ಮೂಲಕ ಮನವಿ ಸಲ್ಲಿಸಿ, ಕಾರ್ಡ್‌ ಪಡೆದುಕೊಂಡೆ
–ಗಗನ್, ಬೊಮ್ಮನಹಳ್ಳಿ

**

ಈ ಯೋಜನೆಯು ವೃದ್ಧರು ಸೇರಿದಂತೆ ಎಲ್ಲರಿಗೂ ಸಹಾಯಕವಾಗಿದೆ. ಕಚೇರಿಗಳಿಗೆ ಅಲೆದಾಡುವುದು ತಪ್ಪಿದೆ. ನಗರದಾದ್ಯಂತ ಈ ಸೇವೆಯನ್ನು ವಿಸ್ತರಿಸಬೇಕು.
–ಚಂದ್ರಶೇಖರ್‌, ರಾಜಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.