ADVERTISEMENT

ನಗರದ ವಿವಿಧೆಡೆ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 19:31 IST
Last Updated 16 ಜೂನ್ 2021, 19:31 IST
ವಿಧಾನಸೌಧದ ಬಳಿ ಬುಧವಾರ ಮಳೆ ಸುರಿಯಿತು –ಪ್ರಜಾವಾಣಿ ಚಿತ್ರ
ವಿಧಾನಸೌಧದ ಬಳಿ ಬುಧವಾರ ಮಳೆ ಸುರಿಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ನಗರದ ವಿವಿಧೆಡೆ ಬುಧವಾರ ಗಾಳಿ ಸಹಿತ ಜೋರು ಮಳೆಯಾಯಿತು.

ನಗರದಲ್ಲಿ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಬೀಸುತ್ತಿತ್ತು. ಬಳಿಕ ಹಲವು ಭಾಗಗಳಲ್ಲಿ ಮಳೆ ಆರಂಭಗೊಂಡಿತು.

ಆರ್.ಟಿ.ನಗರ, ಹೆಬ್ಬಾಳ, ಮನೋರಾಯನಪಾಳ್ಯ, ಗಿರಿನಗರ, ಶ್ರೀನಗರ, ರಾಜಾಜಿನಗರ, ಗುಟ್ಟಹಳ್ಳಿ, ಹಾರೋಹಳ್ಳಿ, ಹೆಗ್ಗನಹಳ್ಳಿ, ಯಲಹಂಕ, ರಾಜರಾಜೇಶ್ವರಿನಗರ, ಮಲ್ಲೇಶ್ವರ,ಬ್ಯಾಟರಾಯನಪುರ, ವಿದ್ಯಾಪೀಠ, ಸಂಪಂಗಿರಾಮನಗರ, ಜಕ್ಕೂರು, ವಿಜಯನಗರ, ಜೆ.ಪಿ.ನಗರ ಸೇರಿದಂತೆ ವಿವಿಧೆಡೆ ಜಿಟಿಜಿಟಿ ಮಳೆ ಸುರಿಯಿತು. ಒಟ್ಟಾರೆ ನಗರದಲ್ಲಿ ಗರಿಷ್ಠ 2.5 ಸೆಂ.ಮೀ ಮಳೆ ದಾಖಲಾಗಿದೆ.

ADVERTISEMENT

ಮುಂಗಾರಿನ ಪರಿಣಾಮ ನಗರದಲ್ಲಿ ಮುಂದಿನ ಎರಡು ದಿನಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಜೋರು ಗಾಳಿಯೊಂದಿಗೆ ಆಗಾಗ ಮಳೆಯಾಗುವ ಮುನ್ಸೂಚನೆ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.