ADVERTISEMENT

Bengaluru Rains | ವಿವಿಧೆಡೆ ಬಿರುಸು ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 23:40 IST
Last Updated 15 ಮೇ 2025, 23:40 IST
ನಗರದ ಖೋಡೆ ವೃತ್ತದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಹರಿಯಿತು
ನಗರದ ಖೋಡೆ ವೃತ್ತದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಹರಿಯಿತು   

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಬಿರುಸು ಮಳೆಯಾಗಿದೆ. 

ಖೋಡೆ ಜಂಕ್ಷನ್‌, ವಿಂಡ್ಸರ್‌ ಮ್ಯಾನರ್‌ನಿಂದ ಪಿ.ಜಿ. ಹಳ್ಳಿ ಕಡೆಗೆ ಹೋಗುವ ರೆಸ್ತೆ, ಅನಿಲ್‌ ಕುಂಬ್ಳೆ ವೃತ್ತ, ವಿದ್ಯಾನಗರ ಕೆಳಸೇತುವೆ ಮುಂತಾದಡೆ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಜಕ್ಕೂರಿನಲ್ಲಿ 2.4 ಸೆಂ.ಮೀ., ಪುಲಕೇಶಿನಗರದಲ್ಲಿ 2.2 ಸೆಂ.ಮೀ., ಬಾಣಸವಾಡಿಯಲ್ಲಿ 1.6 ಸೆಂ.ಮೀ., ಹೊರಮಾವು 1.3 ಸೆಂ.ಮೀ., ಸಂಪಿಗೆರಾಮ ನಗರದಲ್ಲಿ 1.2 ಸೆಂ.ಮೀ., ಪೀಣ್ಯ ಕೈಗಾರಿಕಾ ವಲಯದಲ್ಲಿ 1.1 ಸೆಂ.ಮೀ., ಶೆಟ್ಟಿಹಳ್ಳಿಯಲ್ಲಿ 1 ಸೆಂ. ಮೀ. ಮಳೆ ದಾಖಲಾಗಿದೆ.

ADVERTISEMENT
ವಿಂಡ್ಸರ್‌ ಮ್ಯಾನರ್‌ ಬಳಿ ಮಳೆ ರಸ್ತೆಯಲ್ಲಿ ಹರಿದ ಕಾರಣ ವಾಹನ ಸಂಚಾರ ನಿಧಾನಗೊಂಡಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.