ADVERTISEMENT

ಗ್ರಾಮ ಸುಭೀಕ್ಷೆಗೆ ದೇವತೆಗಳ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 18:54 IST
Last Updated 21 ಅಕ್ಟೋಬರ್ 2018, 18:54 IST
ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿರುವುದು
ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿರುವುದು   

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರ ಗ್ರಾಮದ ಶ್ರೀಕೋಟೆ ಮಾರಮ್ಮದೇವಿ ಜಾತ್ರಾ ಮಹೋತ್ಸವ ಟ್ರಸ್ಟ್ ಆಶ್ರಯದಲ್ಲಿ ಗ್ರಾಮದ ಏಳು ದೇವತೆಗಳ ಪಲ್ಲಕ್ಕಿ ಮೆರವಣಿಗೆ, ವಿಶೇಷ ಪೂಜೆ ನೇರವೇರಿತು.

ಗ್ರಾಮದ ಕೋಟೆ ಮಾರಮ್ಮ ದೇವಿ, ಗಂಗಮ್ಮದೇವಿ, ರಾಮದೇವರು, ಚಂದ್ರಮೌಳೇಶ್ವರ ಸ್ವಾಮಿ, ಬಸವಣ್ಣ ದೇವರು, ಚನ್ನರಾಯಸ್ವಾಮಿ ಮತ್ತು ಕೂರ್ಮಾನಹಳ್ಳಿ ಆಂಜನೇಯ ಸ್ವಾಮಿ ದೇವರನ್ನು ವಿಶೇಷ ವಾದ್ಯದ ಮೂಲಕ ಬಸವೇಶ್ವರ ದೇವಸ್ಥಾನದ ಮುಂಭಾಗಕ್ಕೆ ಪಲ್ಲಕ್ಕಿಯ ಮೂಲಕ ತರಲಾಯಿತು.

ಗ್ರಾಮದ ಏಳು ದೇವರುಗಳನ್ನು ವಿಜಯದಶಮಿ ಮುಗಿದ ಮೇಲೆ ಒಟ್ಟಿಗೆ ಪೂಜಿಸುವ ಪರಿಪಾಠ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗೆ ಎಲ್ಲ ದೇವರನ್ನು ಒಂದು ಕಡೆ ತಂದು ಪೂಜಿಸುವುದರಿಂದ ಗ್ರಾಮದಲ್ಲಿ ಸುಭೀಕ್ಷೆ ನೆಲೆಸುತ್ತದೆ ಎಂಬ ನಂಬಿಕೆ ಇದೆ’ ಎಂದು ಗ್ರಾಮದ ಹಿರಿಯ ನಿವಾಸಿ ಮಲ್ಲಯ್ಯ ಹೇಳಿದರು.

ADVERTISEMENT

ಸಂಜೆ ವೇಳೆ ದೇವರನ್ನು ಪಲ್ಲಕ್ಕಿಯ ಮೆರವಣಿಗೆ ಮಾಡಿ ಮತ್ತೆ ಗುಡಿಗಳಿಗೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.