ADVERTISEMENT

ಒಸಿಐ ಕಾರ್ಡ್‌ ವಿದ್ಯಾರ್ಥಿಗಳಿಗೆ ಹೈಕೋರ್ಟ್ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:43 IST
Last Updated 2 ಜುಲೈ 2021, 19:43 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸಾಗರೋತ್ತರ ಭಾರತೀಯ ನಾಗರಿಕ(ಒಸಿಐ) ಕಾರ್ಡ್‌ಗಳನ್ನು ಹೊಂದಿರುವ 45 ವಿದ್ಯಾರ್ಥಿಗಳು 2021ರ ಸಿಇಟಿ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರ ಮತ್ತು ಕೆಇಎ ಹೊರಡಿಸಿದ ಅಧಿಸೂಚನೆಗಳನ್ನು ರದ್ದುಪಡಿಸುವಂತೆ ನಿರ್ದೇಶನಗಳನ್ನು ನೀಡಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರಿದ್ದ ಪೀಠ, ಈ ಆದೇಶ ನೀಡಿತು.

2021ರ ಮಾರ್ಚ್ 4ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಒಸಿಐ ಕಾರ್ಡ್‌ ಹೊಂದಿದವರನ್ನು ನಾಗರಿಕರೆಂದು ಪರಿಗಣಿಸುವ ಹಕ್ಕು ನಿರಾಕರಿಸಿದೆ. ಎನ್‌ಆರ್‌ಐ ಸೀಟುಗಳಿಗೆ ಮಾತ್ರ ಅವರು ಅರ್ಹರು. ಭಾರತೀಯ ನಾಗರಿಕರಿಗೆ ಮೀಸಲಾಗಿರುವ ಸೀಟುಗಳಿಗೆ ಒಸಿಐ ಕಾರ್ಡುದಾರರು ಅರ್ಹರಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ADVERTISEMENT

‘ಸಿಇಟಿ –2021ಕ್ಕೆ ನೊಂದಾಯಿಸುವ ಹಕ್ಕು ನಿರಾಕರಿಸಿದರೆ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ನಿರಾಕರಣೆ ಆಗಲಿದೆ’ ಎಂಬುದು ಅರ್ಜಿದಾರರು ವಾದ. ‘ಅರ್ಜಿದಾರರು ಭಾರತದಲ್ಲಿ ನೆಲೆಸಿ ಏಳೆಂಟು ವರ್ಷಗಳಿಂದ ತಮ್ಮ ಶಿಕ್ಷಣವನ್ನು ಇಲ್ಲಿಯೇ ನಡೆಸಿದ್ದಾರೆ. ಅವರು ಸಿಇಟಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.