ದೇವನಹಳ್ಳಿ: ಪತಿ ಮರ್ಯಾದೆಗೇಡು ಹತ್ಯೆಯಿಂದ ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿದಲೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಮೀನಾಕ್ಷಿ (22) ಆತ್ಮಹತ್ಯೆ ಮಾಡಿಕೊಂಡವರು.
ಬಿದಲೂರಿನ ಹರೀಶ್ ಎಂಬುವರನ್ನು ಕಳೆದ ಒಂಬತ್ತು ತಿಂಗಳ ಹಿಂದೆ, ಅವರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇದಕ್ಕೆ ಕುಟುಂಬದ ಆಕ್ಷೇಪ ಇತ್ತು. ಹರೀಶ್ ಅವರನ್ನು ಮೀನಾಕ್ಷಿ ಅವರ ಸೋದರ ಈಚೆಗೆ ನಲ್ಲೂರು ಗ್ರಾಮದ ಗುಲಾಬಿ ತೋಟದಲ್ಲಿ ಹತ್ಯೆ ಮಾಡಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮೀನಾಕ್ಷಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.