ADVERTISEMENT

‘ಬಡವರಿಗೆ ಮನೆ: ಕಾನೂನು ಸರಳಗೊಳಿಸಲು ಕ್ರಮ’

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 20:48 IST
Last Updated 31 ಜನವರಿ 2023, 20:48 IST
ಬೆಂಗಳೂರಿನ ಅಗ್ರಹಾರ ಪಾಳ್ಯದಲ್ಲಿ ನಡೆದ ವಸತಿ ಸಮುಚ್ಚಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳಿಗೆ ಮನೆಗಳ ಹಸ್ತಾಂತರದ ದಾಖಲೆಗಳನ್ನು ನೀಡಿದರು. ವಸತಿ ಸಚಿವ ವಿ. ಸೋಮಣ್ಣ ಇದ್ದರು.
ಬೆಂಗಳೂರಿನ ಅಗ್ರಹಾರ ಪಾಳ್ಯದಲ್ಲಿ ನಡೆದ ವಸತಿ ಸಮುಚ್ಚಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳಿಗೆ ಮನೆಗಳ ಹಸ್ತಾಂತರದ ದಾಖಲೆಗಳನ್ನು ನೀಡಿದರು. ವಸತಿ ಸಚಿವ ವಿ. ಸೋಮಣ್ಣ ಇದ್ದರು.   

ಬೆಂಗಳೂರು: ‘ಆರ್ಥಿಕವಾಗಿ ಹಿಂದುಳಿದವರು ವಸತಿಗಾಗಿ ನಿವೇಶನ ಪಡೆಯುವುದು ಸುಲಭವಾಗುವಂತೆ ಈಗಿರುವ ಭೂ ಕಂದಾಯ ಕಾನೂನನ್ನು ಸರಳಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಯಲಹಂಕ ತಾಲ್ಲೂಕಿನ ಅಗ್ರಹಾರ ಪಾಳ್ಯದಲ್ಲಿ ವಸತಿ ಇಲಾಖೆಯ ವತಿಯಿಂದ ‘ಮುಖ್ಯಮಂತ್ರಿಗಳ ಒಂದು ಲಕ್ಷಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿ ಮಂಗಳವಾರ ಆಯೋಜಿಸಲಾಗಿದ್ದ ವಸತಿ ಸಮುಚ್ಚಯಗಳ ಲೋಕಾರ್ಪಣೆ, ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಂದಾಯ ಕಾಯ್ದೆಯಲ್ಲಿ ಮನೆ ನಿರ್ಮಿಸಲು ನಿರ್ದಿಷ್ಟ ರಿಯಾಯಿತಿಗಳಿಲ್ಲ.ಈಗಿರುವ ಕಾನೂನುಗಳಿಂದ ಜನ
ಸಾಮಾನ್ಯರು ನಿವೇಶನ ಖರೀದಿಸುವ ಪರಿಸ್ಥಿತಿ ಇಲ್ಲದಂತಾಗಿದೆ. ಹೀಗಾಗಿ, ಮನೆ ನಿರ್ಮಿಸಲು ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ತೆಗೆದು ಹಾಕಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.