ADVERTISEMENT

ನೀರಿನ ಸಮಸ್ಯೆ ಗುರುತಿಸಿ, ಪರಿಹರಿಸಿ: ಶಾಸಕ ಮುನಿರಾಜು ತಾಕೀತು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 18:13 IST
Last Updated 30 ಏಪ್ರಿಲ್ 2025, 18:13 IST
ಚಿಕ್ಕಸಂದ್ರದಲ್ಲಿ ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಾವೇರಿ ನೀರಿನ ಸಮರ್ಪಕ ಪೂರೈಕೆ ಆಗದಿರುವುದನ್ನು ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಚಿಕ್ಕಸಂದ್ರದಲ್ಲಿ ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಾವೇರಿ ನೀರಿನ ಸಮರ್ಪಕ ಪೂರೈಕೆ ಆಗದಿರುವುದನ್ನು ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.   

ಪೀಣ್ಯ ದಾಸರಹಳ್ಳಿ: ಕ್ಷೇತ್ರದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ, ಆ ಬಡಾವಣೆಗಳನ್ಳು ಗುರುತಿಸಿ, ತುರ್ತಾಗಿ ಪರಿಹರಿಸುವಂತೆ ಶಾಸಕ ಎಸ್. ಮುನಿರಾಜು, ಜಲಮಂಡಳಿ ಅಧಿಕಾರಿಗಳಿ ತಾಕೀತು ಮಾಡಿದರು.

‘ನಮ್ಮ ಮನೆಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಚಿಕ್ಕಸಂದ್ರದ ನಾಗರಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಜಲಮಂಡಳಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸಾರ್ವಜನಿಕರ ಎದರೇ ಸಮಸ್ಯೆ ಕುರಿತು ಚರ್ಚಿಸಿದರು. ‘ಜನಗಳಿಗೆ ತೊಂದರೆ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ. ಕೂಡಲೇ ಸಮಸ್ಯೆಯನ್ನು ಸರಿಪಡಿಸಬೇಕು’ ಎಂದು ಜಲಮಂಡಳಿ ಎಇಇ ಐಶ್ವರ್ಯ ಅವರಿಗೆ ಸೂಚಿಸಿದರು. 

'ವರ್ಷಗಳಿಂದ ಕಾವೇರಿ ನೀರಿಗಾಗಿ ನಿವಾಸಿಗಳು ಕಾಯುತ್ತಿದ್ದಾರೆ. ಸಾಕಷ್ಟು ನೀರು ಇದ್ದು, ಪೂರೈಸಲು ಎಲ್ಲ ಸೌಲಭ್ಯಗಳಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಎಲ್ಲಿ ನೀರು ಪೂರೈಕೆ ಸಮಸ್ಯೆ ಇದೆಯೋ ಎಂಬುದನ್ನು ಪರಿಶೀಲಿಸಿ, ಸಮಸ್ಯೆಯನ್ನು ಪರಿಹರಿಸಿ' ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.