ADVERTISEMENT

ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 19:54 IST
Last Updated 20 ಡಿಸೆಂಬರ್ 2020, 19:54 IST

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯ ಸಂಸ್ಥಾಪಕ ವಿ.ನಾರಾಯಣಸ್ವಾಮಿ ರಾವ್ ಅವರ ಜನ್ಮದಿನೋತ್ಸವದ ಅಂಗವಾಗಿ ಮಂಡಳಿಯ ರಾಮನವಮಿ ಆಚರಣಾ ಟ್ರಸ್ಟ್ ವತಿಯಿಂದ ‘ದಿ ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌’ ಉದ್ಘಾಟನಾ ಕಾರ್ಯಕ್ರಮವನ್ನು ಡಿ.21ರಂದು ಬೆಳಿಗ್ಗೆ 12 ಗಂಟೆಗೆ ಫೇಸ್‌ಬುಕ್‌ನಲ್ಲಿ ನೇರಪ್ರಸಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಶಾಸ್ತ್ರೀಯ ಸಂಗೀತವನ್ನು ಯುವ ಜನಾಂಗದೆಡೆಗೆ ಡಿಜಿಟಲ್‌ ಮೂಲಕ ಕೊಂಡೊಯ್ಯುವ ಕೆಲಸವನ್ನುದಿ ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌ ಮಾಡಲಿದೆ.

ನಾರಾಯಣಸ್ವಾಮಿ ರಾವ್ ಅವರ ಕುರಿತಾಗಿಪಂಡಿತ್‌ ಜಯತೀರ್ಥ ಮೇವುಂಡಿ ಅವರು ಹಾಡಿರುವ 10 ನಿಮಿಷಗಳ ಸಂಸ್ಕೃತ ಗೀತೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು.

ADVERTISEMENT

ಕಾರ್ಯಕ್ರಮವನ್ನು ಸಂಸ್ಥೆಯ ಫೇಸ್‌ಬುಕ್‌ ಪುಟwww.facebook.com/SreeRamasevaMandali ಮೂಲಕ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.