ADVERTISEMENT

ವಂಚನೆ ಆರೋಪ: ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 20:34 IST
Last Updated 23 ಜೂನ್ 2022, 20:34 IST

ಬೆಂಗಳೂರು: ಇಂಡಿಯನ್ ಬ್ಯಾಂಕ್ ಹನುಮಂತನಗರದ ಶಾಖೆಯ ವ್ಯವ ಸ್ಥಾಪಕ ಹರಿಶಂಕರ್ ಅವರನ್ನು ವಂಚನೆ ಆರೋಪದಲ್ಲಿ ಹನುಮಂತ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೇ 13 -19 ರ ವರೆಗೆ ಠೇವಣಿದಾರರರಾದ ಅನಿತಾ ಅವರ ನಿಶ್ಚಿತ ಠೇವಣಿ (ಎಫ್ ಡಿ‌) ಮೇಲೆ ಹರಿಶಂಕರ್ ಸುಮಾರು ₹ 5.70 ಕೋಟಿಯಷ್ಟು ಸಾಲ ತೆಗೆದ ಆರೋಪವಿದೆ. ಸಹಾಯಕ ವ್ಯವಸ್ಥಾಪಕರಾದ ಕೌಸಲ್ಯ, ಕ್ಲರ್ಕ್ ಮುನಿರಾಜು ಅವರ ಮೂಲಕ ಹರಿಕರನ್ ಸಾಲ ಮಾಡಿಸಿಕೊಂಡಿದ್ದರು ಎಂದು ಗೊತ್ತಾಗಿದೆ.

ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆ, ಕರ್ನಾಟಕದ 2 ಬ್ಯಾಂಕ್ ಖಾತೆಗಳಿಗೆ ಆರೋಪಿ ಹಣ ಜಮೆ ಮಾಡಿದ್ದರು. ಬ್ಯಾಂಕಿನ ಆಂತರಿಕ ಪರಿಶೀಲನೆ ವೇಳೆ ವಂಚನೆ ಬಯಲಾಗಿತ್ತು. ಈ ಬಗ್ಗೆ ಹನುಮಂತ ನಗರ ಠಾಣೆಗೆ ಇಂಡಿಯನ್ ಬ್ಯಾಂಕ್ ವಲಯ ಪ್ರಬಂಧಕ ಡಿ.ಎಸ್. ಮೂರ್ತಿ ದೂರು ನೀಡಿದ್ದರು.
ತನಿಖೆ ವೇಳೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಹಣ ಪಾವತಿಸಿರುವುದಾಗಿ ಹರಿಶಂಕರ್ ಹೇಳಿದ್ದರು. ಡೇಟಿಂಗ್ ಆ್ಯಪ್ ನಲ್ಲಿ ಯುವತಿ ಸಂಪರ್ಕ ಬೆಳೆದಿದ್ದು, ಅಷ್ಟೂ ಹಣ ಅದೇ ಯುವತಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಯ ಅಸ್ಪಷ್ಟ ಹೇಳಿಕೆಯಿಂದ ಪೊಲೀಸರು ತನಿಖೆ
ಮುಂದುವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.