ADVERTISEMENT

ಓದುವ ಹವ್ಯಾಸ ರೂಢಿಸಿಕೊಳ್ಳಿ: ರಜಿನಿ ಜಯರಾಮ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:48 IST
Last Updated 19 ನವೆಂಬರ್ 2021, 16:48 IST

ಬೆಂಗಳೂರು: ‘ಕಲಿಕೆ ನಿರಂತರ ಪ್ರಕ್ರಿಯೆ. ಹೀಗಾಗಿಯುವಕರು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಮೊಬೈಲ್‌ ಗೀಳಿನಿಂದ ದೂರವಿರಬೇಕು’ ಎಂದುಜೈನ್‌ ಡೀಮ್ಡ್‌ ವಿಶ್ವವಿದ್ಯಾಲಯದ ‍ಪ್ರಾಧ್ಯಾಪಕಿ ರಜಿನಿ ಜಯರಾಮ್‌ ತಿಳಿಸಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿಜೈನ್‌ ವಿಶ್ವವಿದ್ಯಾಲಯ, ಗ್ರಂಥಾಲಯ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಗ್ರಂಥಾಲಯ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ಡಿಜಿಟಲ್‌ ಯುಗದಲ್ಲಿ ಯುವಕರಲ್ಲಿ ಓದುವ ಹವ್ಯಾಸ’ ಕುರಿತು ಉಪನ್ಯಾಸ ನೀಡಿದರು.

‘ಈಗ ಯುವ ಸಮುದಾಯದ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾಗಿದೆ. ಅದರಿಂದಾಗಿ ಸ್ಥೂಲ ದೇಹಾಕಾರ ಹೊಂದುತ್ತಿದ್ದು, ಹೆಚ್ಚಿನವರು ಖಿನ್ನತೆಗೂ ಒಳಗಾಗುತ್ತಿದ್ದಾರೆ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಪ್ರೊ.ಎ.ವೈ.ಅಸುಂಡಿ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಜೈನ್‌ ಸಮೂಹದ ಗ್ರಂಥಪಾಲಕ‌ರಾದ ಮಂಜುನಾಥ್‌, ಶೇಖರ್‌ ಹಾಗೂ ಎನ್‌.ಮೀರಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.