ADVERTISEMENT

ಜನ್‌ಧನ್ ಹೆಸರಿನಲ್ಲಿ ₹ 1.52 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 16:19 IST
Last Updated 12 ಡಿಸೆಂಬರ್ 2020, 16:19 IST

ಬೆಂಗಳೂರು: ಪ್ರಧಾನಮಂತ್ರಿ ಜನ್‌ಧನ್‌ ಯೋಜನೆಯಡಿ ಸಾಲ ಕೊಡಿಸುವ ಆಮಿಷವೊಡ್ಡಿದ್ದ ವ್ಯಕ್ತಿಯೊಬ್ಬ, ನಗರದ ನಿವಾಸಿ ಸುಶೀಲಾ ಎಂಬುವರಿಂದ ₹ 1.52 ಲಕ್ಷ ಪಡೆದು ವಂಚಿಸಿದ್ದಾರೆ.

’ವಂಚನೆ ಸಂಬಂಧ ಸುಶೀಲಾ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ತಿಳಿಸಿದರು.

‘ಜನ್‌ಧನ್ ಯೋಜನೆಯಡಿ ಸಬ್ಸಿಡಿ ಸಾಲ ನೀಡಲಾಗುವುದು’ ಎಂಬ ಸಂದೇಶ ಸುಶೀಲಾ ಮೊಬೈಲ್‌ಗೆ ಬಂದಿತ್ತು. ಅದನ್ನು ನಂಬಿದ್ದ ಅವರು, ಅದರಲ್ಲಿದ್ದ ಮೊಬೈಲ್‌ಗೆ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ‘ನೀವು ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿ ಸಾಲ ಪಡೆಯಲು ಅರ್ಹರಾಗಿದ್ದಿರಾ. ಸಬ್ಸಿಡಿ ಸಾಲ ಮಂಜೂರು ಮಾಡಬೇಕಾದರೆ ಕೆಲ ಶುಲ್ಕ ಪಾವತಿಸಬೇಕು’ ಎಂದು ಆರೋಪಿ ಹೇಳಿದ್ದರು.’

ADVERTISEMENT

‘ಮಾತು ನಂಬಿದ್ದ ಸುಶೀಲಾ, ಆರೋಪಿ ತಿಳಿಸಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 1.52 ಲಕ್ಷ ಜಮೆ ಮಾಡಿದ್ದರು. ಅದಾದ ಬಳಿಕ ಆರೋಪಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.