ADVERTISEMENT

ಉದ್ಯಾನದಲ್ಲಿ ಒಣಕಸದ್ದೇ ದರ್ಬಾರ್‌!

ಲಕ್ಷ್ಮಣರಾವ್ ಪಾರ್ಕ್‌ನಲ್ಲಿ ಅವ್ಯವಸ್ಥೆ l ಕಡಿಮೆ ಆಗುತ್ತಿದೆ ವಾಯು ವಿಹಾರಿಗಳ ಸಂಖ್ಯೆ

ಭೀಮಣ್ಣ ಮಾದೆ
Published 13 ಫೆಬ್ರುವರಿ 2019, 20:00 IST
Last Updated 13 ಫೆಬ್ರುವರಿ 2019, 20:00 IST
ಉದ್ಯಾನ‌ದಲ್ಲಿಯ ಕಸದ ರಾಶಿ(ಎಡಚಿತ್ರ) ಉದ್ಯಾನದ ಬದಿ ಕಟ್ಟಡದ ಅವಶೇಷ ಮತ್ತು ಗೃಹ ತ್ಯಾಜ್ಯ ಸುರಿದಿರುವುದು
ಉದ್ಯಾನ‌ದಲ್ಲಿಯ ಕಸದ ರಾಶಿ(ಎಡಚಿತ್ರ) ಉದ್ಯಾನದ ಬದಿ ಕಟ್ಟಡದ ಅವಶೇಷ ಮತ್ತು ಗೃಹ ತ್ಯಾಜ್ಯ ಸುರಿದಿರುವುದು   

ಬೆಂಗಳೂರು: ತರಗೆಲೆಗಳನ್ನು ಹೊದ್ದು ಮಲಗಿರುವ ನಡಿಗೆ ಪಥ, ದೂಳು ತಿನ್ನುತ್ತ ನಿಂತಿರುವ ವ್ಯಾಯಾಮ ಪರಿಕರ, ತುಂಬಿ ತುಳುಕುತ್ತಿರುವ ಕಸದ ತೊಟ್ಟಿ, ತೆರವಾಗದೆ ಕೊಳೆಯುತ್ತಿರುವ ಮುರಿದು ಬಿದ್ದಿರುವ ಕೊಂಬೆ...

ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಕಂಬರಿನಗರ ವಾರ್ಡ್‌ನ 38ನೇ ಅಡ್ಡರಸ್ತೆಯಲ್ಲಿರುವ ಲಕ್ಷ್ಮಣ ರಾವ್ ಉದ್ಯಾನದ ಸದ್ಯದ
ಚಿತ್ರಣವಿದು.

ಪಕ್ಕದಲ್ಲಿ ಒಣಕಸ ಸಂಗ್ರಹ ಕೇಂದ್ರವಿದ್ದರೂ ಕೆಲ ದುಷ್ಕರ್ಮಿಗಳು ರಾತ್ರಿ ವಾಹನಗಳಲ್ಲಿ ತುಂಬಿಕೊಂಡು ಬಂದ ಕಸವನ್ನು ಉದ್ಯಾನದ ಬದಿ ಸುರಿದು ಹೋಗುತ್ತಾರೆ.ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ. ಸುತ್ತಲಿನ ರಸ್ತೆಯಪಾದಚಾರಿ ಮಾರ್ಗಗಗಳನ್ನು ಗೂಡಂಗಡಿಯವರು ಹಾಗೂ ತಳ್ಳುಗಾಡಿಯಲ್ಲಿ ಆಹಾರ ಮಾರುವವರು ಆಕ್ರಮಿಸಿಕೊಂಡಿದ್ದಾರೆಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ಅಲ್ಲಿಯ ನಾಗರಿಕರೊಬ್ಬರನ್ನು ಮಾತಿಗೆಳೆದಾಗ, ‘ಬಿಬಿಎಂಪಿಯ ಪೌರಕಾರ್ಮಿಕರು ಒಣಕಸವನ್ನು ಗುಡಿಸಿ ಬೆಂಕಿ ಹಾಕುತ್ತಾರೆ. ಹೊಗೆ ಆವರಿಸಿ ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಉದ್ಯಾನವನದಲ್ಲಿಹಿರಿಯ ನಾಗರಿಕರಿಗಾಗಿ ಅಳವಡಿಸಿರುವ ವ್ಯಾಯಾಮ ಸಾಮಗ್ರಿಗಳು ಸಹ ಬಳಕೆಯಾಗುತ್ತಿಲ್ಲ ಎಂದು ತಿಳಿಸುತ್ತಾರೆ.

ಮೆಟ್ರೊ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಉದ್ಯಾನದ ಸುತ್ತ ವಾಹನಗಳನ್ನು ನಿಲ್ಲಿಸುತ್ತಾರೆ. ಅವರುತಿಂಡಿ ಪೊಟ್ಟಣ, ಚಹಾ ಕಪ್‌ಗಳನ್ನು ಉದ್ಯಾನವನದ ಬದಿ ಎಸೆಯುತ್ತಾರೆ. ಇದರಿಂದ ವಾಯುವಿಹಾರಿಗಳು ಉದ್ಯಾನವನದಲ್ಲಿಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಅವರು.

ಉದ್ಯಾನದ ಪ್ರವೇಶಕ್ಕೆ ಸಮಯ ನಿಗದಿ ಮಾಡಲಾಗಿದೆ.ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡುವುದಿದ್ದರು ಸಹ ಸಮಯ ಪಾಲನೆಯನ್ನು ಮಾತ್ರ ಕಟ್ಟುನಿಟ್ಟಾಗಿಮಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

2009ರಲ್ಲಿ ಉದ್ಯಾನವನದ ಹತ್ತಿರ ಮೆಟ್ರೊ ನಿಲ್ದಾಣನಿರ್ಮಾಣ ಮಾಡುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅದಾಗಿಯೂ ಮೆಟ್ರೊ ನಿಲ್ದಾಣನಿರ್ಮಾಣ ಮಾಡಲಾಗಿತ್ತು. ಮೆಟ್ರೊ ನಿಗಮದವರು ಕಾಮಗಾರಿ ವೇಳೆ ಉದ್ಯಾನದ ಮರಗಳನ್ನು ಕಡಿದಿದ್ದರು. ಬೇಲಿಯನ್ನು ಸಹ ಮುರಿದ್ದರು. ಆದ್ದರಿಂದ ಉದ್ಯಾನ ಈ ಸ್ಥಿತಿಗೆ ಬಂದಿದೆ ಎಂದು ಈ ಪ್ರದೇಶದ ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್‌ ದೂರುತ್ತಾರೆ.

ಅವ್ಯವಸ್ಥೆಯ ಕಾರಣ ಉದ್ಯಾನವನಕ್ಕೆ ಬರುವ ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ. ಬೆರಳಣಿಕೆಯಷ್ಟು ಜನ ಮಾತ್ರಬೆಳಿಗ್ಗೆ ಹಾಗೂ ಸಾಯಂಕಾಲ ಉದ್ಯಾವನಕ್ಕೆ ಬಂದು ವಿಶ್ರಾಂತಿ ಪಡೆಯುತ್ತಾರೆ. ವಿದ್ಯಾರ್ಥಿಗಳು ಉದ್ಯಾನದಬೆಂಚಿನ ಮೇಲೆ ಕುಳಿತು
ಓದಿಕೊಳ್ಳುತ್ತಾರೆ.

ಸದ್ಯಉದ್ಯಾನವನದಲ್ಲಿ ಅಭಿವೃದ್ಧಿ ಕಾಮಗಾರಿಯನ್ನುಕೈಗೆತ್ತಿಕೊಳ್ಳಲಾಗಿದೆ. ಬೆಂಚುಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.