ADVERTISEMENT

ಶಿಕ್ಷಕರು, ಕಲಾವಿದರಿಗೆ ನೆರವು ನೀಡಿ: ಜೆಡಿಯು

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 3:56 IST
Last Updated 7 ಜುಲೈ 2020, 3:56 IST
ಜೆಡಿಯು ಕಾರ್ಯಕರ್ತರು, ಶಿಕ್ಷಕರು ಹಾಗೂ ಕಲಾವಿದರು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾವರೆಗೆ 'ಜ್ಯೋತಿಯಾತ್ರೆ' ನಡೆಸಿದರು. ಮಹಿಮ ಪಟೇಲ್, ಜೆಡಿಯು ಕಾರ್ಯಾಧ್ಯಕ್ಷ ಜಿ.ವಿ.ರಾಮಚಂದ್ರಯ್ಯ, ವಕ್ತಾರ ಚಂದ್ರಶೇಖರ್ ವಿ.ಸ್ಥಾವರಮಠ, ಪ್ರಧಾನ ಕಾರ್ಯದರ್ಶಿ ಆನಂದ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವರಾಮ, ಕಾರ್ಯದರ್ಶಿ ಬಿ.ಪಿ. ರಮೇಶಗೌಡ ಹಾಗೂ ಇತರರು ಇದ್ದರು.

ಬೆಂಗಳೂರು: ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿ ಜೆಡಿಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

'ಖಾಸಗಿ ಶಾಲೆಗಳ 35 ಸಾವಿರ ಶಿಕ್ಷಕರು ಹಾಗೂ ಉಪನ್ಯಾಸಕರು ಮೂರು ತಿಂಗಳಿನಿಂದ ವೇತನವಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಂಟು ಮಂದಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕ ಸಮೂಹ ಶೋಚನೀಯ ಸ್ಥಿತಿ ತಲುಪಿದೆ. ಶಿಕ್ಷಕರಿಗಾಗಿ ₹50 ಕೋಟಿ ನೆರವು ಘೋಷಿಸಬೇಕು' ಎಂದು ಮಹಿಮ ಪಟೇಲ್ ಮನವಿ ಮಾಡಿದರು.

'ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ಶ್ರಮಿಕರಿಗಾಗಿ ಸರ್ಕಾರ ಪಡಿತರ ಹಾಗೂ ನೆರವು ನೀಡಿದೆ. ಆಟೊ, ಟ್ಯಾಕ್ಸಿ ಚಾಲಕರು, ನೇಕಾರರು, ಸವಿತಾ ಸಮಾಜ ಸೇರಿ ಹಲವಾರು ಸಮುದಾಯಗಳಿಗೆ ಪರಿಹಾರ ಘೋಷಿಸಿದೆ. ಅದೇ ರೀತಿ ಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಜನಪದ, ರಂಗಭೂಮಿ, ಶಾಸ್ತ್ರೀಯ ಸಂಗೀತ, ನೃತ್ಯ ಕಲಾವಿದರ ಜೀವನ ನಿರ್ವಹಣೆ ಕಷ್ಟವಾಗಿದೆ. ಅವರಿಗೂ ಸರ್ಕಾರ ₹20 ಕೋಟಿ ನೆರವು ಘೋಷಿಸಬೇಕು' ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.