ADVERTISEMENT

ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಬ್‌ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 18:34 IST
Last Updated 10 ಮಾರ್ಚ್ 2022, 18:34 IST
   

ಬೆಂಗಳೂರು: ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಕ್ಯಾಬ್‌ ಚಾಲಕ ಮಂಜುನಾಥ್‌ನನ್ನು ಜೀವನ್‌ಬಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬುಧವಾರ ರಾತ್ರಿ 2 ಗಂಟೆ ಸುಮಾರಿಗೆ ಯುವಕನೊಬ್ಬ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗಲು ಕ್ಯಾಬ್‌ ಕಾಯ್ದಿರಿಸಿದ್ದ. ಮದ್ಯಪಾನ ಮಾಡಿದ್ದ ಆತ ಕ್ಯಾಬ್‌ ಹತ್ತುವ ವೇಳೆ ಕೆಳಗೆ ಬಿದ್ದಿದ್ದ. ಆಗ ಆತನ ಸ್ನೇಹಿತೆ ಕ್ಯಾಬ್‌ ಚಾಲಕನ ನೆರವು ಕೇಳಿದ್ದಳು. ಯುವಕನನ್ನು ಕ್ಯಾಬ್‌ ಒಳಗೆ ಕೂರಿಸುವ ವೇಳೆ ಆತ ಯುವತಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT