ADVERTISEMENT

ಗಮನಸೆಳೆದ ಎವಿಆರ್‌ ಟ್ರಂಕ್‌ ಶೋ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:03 IST
Last Updated 23 ಫೆಬ್ರುವರಿ 2019, 20:03 IST
ಕಾಜಲ್‌ ಭಾಟಿಯಾ ಪ್ರದರ್ಶನ ಅವರು ಉದ್ಘಾಟಿಸಿದರು
ಕಾಜಲ್‌ ಭಾಟಿಯಾ ಪ್ರದರ್ಶನ ಅವರು ಉದ್ಘಾಟಿಸಿದರು   

ಬೆಂಗಳೂರು: ಎವಿಆರ್‌ಜುವೆಲ್ಲರಿಯ ಜಯನಗರದ ಮಳಿಗೆಯಲ್ಲಿ ‘ಎವಿಆರ್ ಟ್ರಂಕ್ ಶೋ’ ಹೆಸರಿನ ಮೂರು ದಿನದ ಆಭರಣ ಪ್ರದರ್ಶನ ಮೇಳ ಶುಕ್ರವಾರ ಆರಂಭಗೊಂಡಿದೆ.

2018ರಮಿಸೆಸ್‌ ಇಂಡಿಯಾ ವಿಜೇತೆ ಕಾಜಲ್‌ ಭಾಟಿಯಾ ಪ್ರದರ್ಶನ ಉದ್ಘಾಟಿಸಿದರು.

ವಜ್ರ, ಮುತ್ತು, ರತ್ನ, ಹವಳ ಮತ್ತು ನಿಸರ್ಗದತ್ತವಾದ ಬಹುವಿಧದ ನೀಲಮಣಿ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ವಿನ್ಯಾಸದ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 300ಕ್ಕೂ ಅಧಿಕ ವಿನ್ಯಾಸಕಾರರು ಇವುಗಳನ್ನು ರೂಪಿಸಿದ್ದಾರೆ. ಭಾನುವಾರವರೆಗೂ ಪ್ರದರ್ಶನ ನಡೆಯಲಿದೆ.

ADVERTISEMENT

ಶುಕ್ರವಾರ ಮತ್ತು ಶನಿವಾರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಗ್ರಾಹಕರು ಆಭರಣಗಳನ್ನು ಧರಿಸಿ ಖುಷಿಪಟ್ಟರು.ಕೆಲವರು ಆಭರಣಗಳನ್ನು ಧರಿಸಿ ಸೆಲ್ಫಿ ತೆಗೆದುಕೊಂಡರು.

ಆ್ಯಪ್‌ ಅಭಿವೃದ್ಧಿ: ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ.ಆ್ಯಪ್ ಬಳಸಿ ಗ್ರಾಹಕರು ತಮ್ಮ ಫೋಟೊ ಕ್ಲಿಕ್ಕಿಸಿದರೆ ಪ್ರದರ್ಶನದಲ್ಲಿ ಹಾಗೂ ಮಳಿಗೆಯಲ್ಲಿ ಲಭ್ಯವಿರುವ ವಿವಿಧ ವಿನ್ಯಾಸದ ಆಭರಣಗಳು ಗ್ರಾಹಕರ ಭಾವಚಿತ್ರದ ಮೇಲೆ ಬಂದು ಕೂರುತ್ತವೆ. ಆಭರಣ ಧರಿಸಿದರೆ ತಾವು ಹೇಗೆ ಕಾಣಬಹುದು ಎಂಬ ಕಲ್ಪನೆ ಮೂಡಿಸಲು ಇದು ಸಹಕಾರಿ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.