ADVERTISEMENT

ಕೆ.ಆರ್.ಪುರ: ಜೂಟ್‌ ಬ್ಯಾಗ್ ತಯಾರಿಕೆ ಶಿಬಿರ ಸಂಪನ್ನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 17:39 IST
Last Updated 22 ಜೂನ್ 2025, 17:39 IST
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್ ಅವರು ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್ ಅವರು ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿದರು   

ಕೆ.ಆರ್.ಪುರ: ಸಮೀಪದ ಮಂಡೂರಿನ ತಾಲ್ಲೂಕು ಪಂಚಾಯಿತಿ ಹಾಗೂ‌ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಪೂರ್ಣಗೊಳಿಸಿದವರಿಗೆ ಪೂರ್ವ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್ ಅವರು ಪ್ರಮಾಣಪತ್ರ ವಿತರಿಸಿದರು.

14 ದಿನಗಳು ನಡೆದ ತರಬೇತಿಯಲ್ಲಿ 28 ಮಹಿಳೆಯರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳು ಜೂಟ್‌ ಬ್ಯಾಗ್ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಸಂತ್ ಕುಮಾರ್, ‘ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಬೇಕು, ಇದರಿಂದ ಸರ್ಕಾರದ ಉದ್ದೇಶ ಸಫಲವಾಗುತ್ತದೆ’ ಎಂದರು.

ADVERTISEMENT

ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್ ಮಾತನಾಡಿ, ‘ಯಾರ ಹಂಗೂ ಇಲ್ಲದೆ ಧೈರ್ಯವಾಗಿ ಜೀವನ ನಡೆಸಲು ಇಂಥ ಸ್ವ ಉದ್ಯೋಗ ತರಬೇತಿಗಳು ಪ್ರಯೋಜನಕಾರಿ. ಉಚಿತ ತರಬೇತಿ ನೀಡುವುದು ನಮ್ಮ ಬ್ಯಾಂಕ್‌ನ ಧ್ಯೇಯವಾಗಿದೆ’ ಎಂದರು.

ಈ ಸಂದರ್ಭದಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಲೋಹಿತ್, ಅಧ್ಯಕ್ಷೆ ಕವಿತಾ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ರಾಜೇಶ್, ಕಾರ್ಯದರ್ಶೀ ಗೀತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.