ADVERTISEMENT

ತಿಗಳ ಸಮುದಾಯದ ಏಳಿಗೆಗೆ ಶ್ರಮಿಸಿ: ಪ್ರಣವಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 19:15 IST
Last Updated 7 ನವೆಂಬರ್ 2021, 19:15 IST
ಪ್ರಣವಾನಂದಪುರಿ ಸ್ವಾಮೀಜಿ ಅವರು ತಿಗಳ ಸಮುದಾಯದ ಸಾಧಕರನ್ನು ಸನ್ಮಾನಿಸಿದರು. ಸಂಘದ ಅಧ್ಯಕ್ಷ ಎಂ.ವೇಣುಗೋಪಾಲ್, ರಾಜ್ಯ ತಿಗಳರ ಮಹಾಸಭಾ ಅಧ್ಯಕ್ಷ ಸುಬ್ಬಣ್ಣ, ಮುಖಂಡರಾದ ರಮೇಶ್, ಜಯರಾಜ್, ಹೂಡಿ ವಿಜಯ್ ಕುಮಾರ್, ಚನ್ನಸಂದ್ರ ಚಂದ್ರಶೇಖರ್, ರಾಮಚಂದ್ರ, ಮುನಿಸ್ವಾಮಿ, ವರ್ತೂರು ಶ್ರೀಧರ್, ರಾಜೇಶ್, ಕುಪ್ಪಿ ಮಂಜುನಾಥ್ ಇದ್ದರು.

ಕೆ.ಆರ್.ಪುರ: ‘ಒಂದು ಸಮುದಾಯ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಏಳಿಗೆಯಾದರೇ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ’ ಎಂದು ಶಿವನಾಪುರ ಆದಿಶಕ್ತಿ ಸಂಸ್ಥಾನ ಮಠದ ಪ್ರಣವಾನಂದಪುರಿ ಸ್ವಾಮೀಜಿ ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕು ತಿಗಳರ (ವಹ್ನಿಕುಲ ಕ್ಷತ್ರಿಯ) ಕ್ಷೇಮಾಭಿವೃದ್ಧಿ ಸಂಘವು ರಾಂಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಸರ್ವಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಸಮುದಾಯವನ್ನು ಗುರುತಿಸಬೇಕಾದರೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೊದಲು ಸದೃಢರಾಗಬೇಕು. ಆಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ತಿಗಳ ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಮಾಜದ ಹಣವಂತರು ಸಹಾಯ ಮಾಡುವ ಮೂಲಕ ಅವರ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಪೂರ್ವ ತಾಲ್ಲೂಕು ತಿಗಳರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ವೇಣುಗೋಪಾಲ್,‘ನಮ್ಮ ಸಮುದಾಯದವರು ಆರ್ಥಿಕವಾಗಿ ಸಬಲರಾಗಿದ್ದು, ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಾಗಿ ಗುರುತಿಸಿಕೊಳ್ಳಬೇಕು. ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಬೇಕು. ಸಮುದಾಯದ ಪ್ರಬಲರನ್ನ ಆಯ್ಕೆ ಮಾಡಿ ಅವರಿಗೆ ಬೆಂಬಲ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.