ADVERTISEMENT

ಕನ್ನಡ ಬೆಳೆಯಲು ‘ಓಬಮಾ’ ಬರಬೇಕು’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 18:57 IST
Last Updated 7 ನವೆಂಬರ್ 2020, 18:57 IST
ಸಾಹಿತಿ ವೈ.ವಿ.ಗುಂಡೂರಾವ್ ಅವರಿಗೆ ಸಂಸ್ಥೆಯ ನಿರ್ದೇಶಕರಾದ ಎಂ.ಅರ್.ದಿನೇಶ್ ‘ಕನ್ನಡದ ಕಂಪು’ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ಕೆ.ವಿ.ರವಿಶಂಕರ್ ಮತ್ತು ಕಾರ್ಯದರ್ಶಿ ಡಾ.ಎ.ಎನ್. ಲೋಕೇಶ್ ಉಪಸ್ಥಿತರಿದ್ದರು.
ಸಾಹಿತಿ ವೈ.ವಿ.ಗುಂಡೂರಾವ್ ಅವರಿಗೆ ಸಂಸ್ಥೆಯ ನಿರ್ದೇಶಕರಾದ ಎಂ.ಅರ್.ದಿನೇಶ್ ‘ಕನ್ನಡದ ಕಂಪು’ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ಕೆ.ವಿ.ರವಿಶಂಕರ್ ಮತ್ತು ಕಾರ್ಯದರ್ಶಿ ಡಾ.ಎ.ಎನ್. ಲೋಕೇಶ್ ಉಪಸ್ಥಿತರಿದ್ದರು.   

ಹೆಸರಘಟ್ಟ: ‘ಎಸ್.ಪಿ.ಬಾಲಸುಬ್ರಹ್ಮಣ್ಯಂ ಪದಗಳಿಗೆ ಜೀವಭಾವ ತುಂಬಿ ಹಾಡುವ ಪ್ರತಿಭಾವಂತ ಗಾಯಕರಾಗಿದ್ದರು. ಅದಕ್ಕೆ ನಾವೆಲ್ಲ ಅವರನ್ನು ಎಸ್.ಪಿ. ಭಾವ ಶುಭ್ರಮಣ್ಯಂ ಎಂದು ಕರೆಯುತ್ತಿದ್ದೆವು’ ಎಂದು ಸಾಹಿತಿ ವೈ.ವಿ.ಗುಂಡೂರಾವ್ ನೆನಪಿಸಿಕೊಂಡರು.

ಹೆಸರಘಟ್ಟ ಗ್ರಾಮದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ‘ಕನ್ನಡ ಕಂಪು’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಅಮೆರಿಕದ ಯಾವ ಅಧ್ಯಕ್ಷರು ಬಂದರೂ ಕನ್ನಡ ಉದ್ಧಾರವಾಗಲ್ಲ. ‘ಓಬಮಾ’ ಬಂದರೆ ಮಾತ್ರ ಕನ್ನಡ ಬೆಳೆಯುತ್ತದೆ. ಅಂದರೆ, ಕನ್ನಡವನ್ನು ಓದುವುದು, ಬರೆಯುವುದು, ಮಾತನಾಡುವುದು ಮಾಡಿದರೆ ಕನ್ನಡ ಬೆಳೆಯುತ್ತದೆ. ಹಾಗಾಗಿ ಓಬಮಾ ಬರಬೇಕು’ ಎಂದು ನಗೆಚಟಾಕಿ ಹಾರಿಸಿದರು.

ADVERTISEMENT

ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.